ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ: ನಾಲ್ವರು ಮೃತ್ಯು

Prasthutha|

ವಿಜಯಪುರ: ರಸ್ತೆ ಬದಿ ಕುಳಿತಿದ್ದವರ ಮೇಲೆ ಅಪರಿಚಿತ ವಾಹನವೊಂದು ಹರಿದ ಪರಿಣಾಮ ಸ್ಥಳದಲ್ಲೇ ನಾಲ್ವರು ಯುವಕರು ಸಾವನ್ನಪ್ಪಿರುವ ಘಟನೆ ವಿಜಯಪುರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ಟೋಲ್ ಗೇಟ್ ಬಳಿ ನಡೆದಿದೆ.

- Advertisement -

ವಿಜಯಪುರದ ವಜ್ರಹನುಮಾನ್ ನಗರದ ಶಿವಾನಂದ ಚೌಧರಿ(25), ಸುನೀಲ್(26), ಈರಣ್ಣ(26), ಪ್ರವೀಣ್ ಪಾಟೀಲ್(30) ಮೃತರು. ಟ್ರಕ್ ಬೈಲ್ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ವಾಹನ ಹರಿದಿದೆ. ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ MH12 QW 8521 ನಂಬರಿನ ಲಾರಿ ಗುದ್ದಿ ಪರಾರಿಯಾಗಿದೆ. ವಾಹನ ಬಂದು ಗುದ್ದಿದ ರಭಸಕ್ಕೆ ಬೈಕ್​ ಹಾಗೂ ನಾಲ್ವರು ಯುವಕರ ಮೃತ ದೇಹಗಳು ಚೆಲ್ಲಾಪಿಲ್ಲಿಯಾಗಿವೆ.