ಕಲ್ಲಿದ್ದಲು ಉದ್ಯಮಿ ಹತ್ಯೆಯ ಸಾಕ್ಷಿಗೆ ಬೆದರಿಕೆ: ಮುಖ್ತಾರ್ ಅನ್ಸಾರಿಗೆ 5 ವರ್ಷ ಜೈಲು

Prasthutha|

ವಾರಣಾಸಿ: ಕಲ್ಲಿದ್ದಲು ಉದ್ಯಮಿ ನಂದ ಕಿಶೋರ್ ರುಂಗ್ಟಾ ಅವರ ಹತ್ಯೆಯ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ ವಾರಣಾಸಿ ನ್ಯಾಯಾಲಯ ಐದೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

- Advertisement -

ವಿಶೇಷ ಸಂಸದ-ಶಾಸಕ ನ್ಯಾಯಾಲಯ ಅನ್ಸಾರಿಗೆ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದ್ರೆ, ಹೆಚ್ಚುವರಿ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಕಲ್ಲಿದ್ದಲು ಉದ್ಯಮಿ ನಂದ ಕಿಶೋರ್ ರುಂಗ್ಟಾ ಅವರ ಸಹೋದರ ಮಹಾವೀರ್ ಪ್ರಸಾದ್ ರುಂಗ್ಟಾ ಅವರಿಗೆ ಬೆದರಿಕೆ ಹಾಕಿದ ಆರೋಪ ಮುಖ್ತಾರ್ ಅನ್ಸಾರಿ ಮೇಲಿದೆ. ತನ್ನ ಕುಟುಂಬ ಸದಸ್ಯರಿಗೆ ಬಾಂಬ್ ಬೆದರಿಕೆಗಳು ಬಂದ ನಂತರ, ಮಹಾವೀರ್ ರುಂಗ್ಟಾ ನವೆಂಬರ್ 5, 1997 ರಂದು ಭೇಲುಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರಿನ ಆಧಾರದ ಮೇಲೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಬೆದರಿಕೆಗೆ ಸಂಬಂಧಿಸಿದಂತೆ ಅನ್ಸಾರಿ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.



Join Whatsapp