ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ತಳ್ಳಿ ಸಹ ಪ್ರಯಾಣಿಕನ ಹತ್ಯೆ

Prasthutha|

ಕಲ್ಲಿಕೋಟೆ: ಸಹ ಪ್ರಯಾಣಿಕನನ್ನು ಚಲಿಸುತ್ತಿದ್ದ ಮಲಬಾರ್ ಎಕ್ಸ್ ಪ್ರೆಸ್ ರೈಲಿನಿಂದ ಹೊರಕ್ಕೆ ತಳ್ಳಿ ಹತ್ಯೆಗೈದ ಘಟನೆ ಕೇರಳದ ಕೊಯಿಲಾಂಡಿ ಬಳಿ ನಡೆದಿದೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಮಿಳುನಾಡಿನ ಶಿವಗಂಗಾ ಮೂಲದ ಸೋನು ಮುತ್ತು (48) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಯಾಣದ ವೇಳೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು, ಆರೋಪಿ ಸೋನು ಮುತ್ತು ಸಹ ಪ್ರಯಾಣಿಕನನ್ನು ಚಲಿಸುತ್ತಿರುವ ರೈಲಿನಿಂದಲೇ ಹೊರಕ್ಕೆ ತಳ್ಳಿ ಹಾಕಿದ್ದಾನೆ.

- Advertisement -

ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಘಟನೆಯ ನಂತರ ರೈಲು ಕಲ್ಲಿಕೋಟೆ ತಲುಪಿದಾಗ ಇತರ ಪ್ರಯಾಣಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೃತ ಯುವಕನಿಗೆ ಅಂದಾಜು 25 ವರ್ಷ ವಯಸ್ಸಾಗಿರಬಹುದು. ಮೃತದೇಹವನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Join Whatsapp