ಬಂಟ್ವಾಳ| ಮನೆಯಲ್ಲಿ ಬೆಂಕಿ ಅನಾಹುತ: ಅಡುಗೆ ಕೋಣೆ ಸಂಪೂರ್ಣ ಭಸ್ಮ

Prasthutha|

ಬಂಟ್ವಾಳ: ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಅಡುಗೆ ಕೋಣೆ ಸಂಪೂರ್ಣ ಭಸ್ಮವಾದ ಘಟನೆ ಜಕ್ರಿಬೆಟ್ಟು ಸಮೀಪದ ಚಂಡ್ತಿಮಾರಿನಲ್ಲಿ ನಡೆದಿದೆ.

- Advertisement -


ಚಂಡ್ತಿಮಾರ್ ನಿವಾಸಿ ಮೋನಪ್ಪ ಪೂಜಾರಿ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕ ಬೆಂಕಿ ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.


ಸ್ಥಳಕ್ಕೆ ಅಗ್ನಿಶಾಮಕ ದಳದ 2 ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಹೀಗಾಗಿ ಮನೆ ರಕ್ಷಿಸಲ್ಪಟ್ಟಿದೆ. ಘಟನೆಯಿಂದ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.

Join Whatsapp