ಬೆಂಗಳೂರು: “ಪಕ್ಷದ ಕೇಂದ್ರ ನಾಯಕತ್ವವು ಶೀಘ್ರದಲ್ಲೇ ಯಡಿಯೂರಪ್ಪ ಬದಲಿಗೆ ಪ್ರಾಮಾಣಿಕ, ಹಿಂದೂ ಪರ ಸಿಎಂ ಆಯ್ಕೆ ಮಾಡಲಿದೆ” ಎಂದು ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಯಡಿಯೂರಪ್ಪ ಬದಲಿಗೆ ಪ್ರಾಮಾಣಿಕ, ಹಿಂದೂ ಪರ ಮತ್ತು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಮರ್ಥರಾದವರನ್ನು ನೂತನ ಮುಖ್ಯಮಂತ್ರಿಯಾಗಿ ಹೈಕಮಾಂಡ್ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.
ಈ ನಡುವೆ ಲಿಂಗಾಯುತರಾಗಿರುವ ಕಾರಣದಿಂದಾಗಿ ಮುಂದಿನ ಸಿಎಂ ಆಗುವ ಅವಕಾಶವನ್ನು ಯತ್ನಾಳ್ ಹೊಂದಿದ್ದಾರೆ ಎಂದು ಹೇಳಲಾಗಿದೆ. ಸಿಎಂ ಹುದ್ದೆಗೆ ಮುಂಚೂಣಿಯಲ್ಲಿರುವ ದೆಹಲಿ ಮೂಲದ ನಾಯಕರು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಇಬ್ಬರೂ ಬ್ರಾಹ್ಮಣರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಒಕ್ಕಲಿಗ ಸಮುದಾಯದವರು.
ಆದರೆ ಲಿಂಗಾಯತ ಸಮುದಾಯದ ನಾಯಕರನ್ನೇ ಆಯ್ಕೆ ಮಾಡಲು ಬಿಜೆಪಿ ಮುಂದಾದರೆ, ಯಡಿಯೂರಪ್ಪ ಬದಲಿಗೆ ಉದ್ಯಮಿ-ರಾಜಕಾರಣಿ ಮತ್ತು ರಾಜ್ಯ ಗಣಿಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯುವ ಶಾಸಕ ಅರವಿಂದ್ ಬೆಲ್ಲದ, ಹಾಗೂ ಯತ್ನಾಳ್ ಹೆಸರು ಕೇಳಿ ಬರುತ್ತಿದೆ.