ಬಿಜೆಪಿ ಸರ್ಕಾರ ಅಯೋಗ್ಯ, ನಿರ್ಜೀವ ಸರ್ಕಾರ: ಸಲೀಂ ಅಹ್ಮದ್ ಟೀಕಾಪ್ರಹಾರ

Prasthutha|

ಮಂಗಳೂರು: ಬಿಜೆಪಿ ಸರ್ಕಾರ ಒಂದು ಅಯೋಗ್ಯ ಮತ್ತು ನಿರ್ಜೀವ ಸರ್ಕಾರವಾಗಿದ್ದು, ಕೋರೊನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಭ್ರಷ್ಟಾಚಾರ ಜನತಾ ಪಾರ್ಟಿ ಆಗಿ ಬದಲಾಗಿದೆ. ಬಿಜೆಪಿ ಸರ್ಕಾರ ಕೊರೋನಾ ಹೆಣದ ಮೇಲೂ ಹಣ ಮಾಡುತ್ತಿದೆ. ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟೀಕಾಪ್ರಹಾರ ನಡೆಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಮಾತನಾಡಿದ ಅವರು, ಮೋದಿ, ಯಡಿಯೂರಪ್ಪನವರು ಜನರಿಗೆ ಸ್ವರ್ಗ ತೋರಿಸುತ್ತೇವೆಂದು ಹೇಳಿ ಈಗ ನರಕ ತೋರಿಸಿದ್ದಾರೆ, ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಜನರಿಗೆ ನರಕ ದರ್ಶನ ಮಾಡಿದ್ದಾರೆ. ಜನರು ಬಿಜೆಪಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಚಾಮರಾಜನಗರದಲ್ಲಿ 36 ಮಂದಿ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ. ಸರ್ಕಾರದ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಿಎಂ, ಸಚಿವರು ಈ ಪ್ರದೇಶಕ್ಕೆ ಭೇಟಿ ನೀಡಿ ಮೃತರಿಗೆ ಸಾಂತ್ವನ ಹೇಳಿ, ನಿರ್ಲಕ್ಷ್ಯ ತೋರಿದ ಅಧಿಕಾರಗಳ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಸುಳ್ಳು ಹೇಳುವುದರಲ್ಲಿ ಮೋದಿಗೆ ಆಸ್ಕರ್ ಪ್ರಶಸ್ತಿ ನೀಡಬಹುದು. ಕೊರೋನಾ ಸೋಂಕಿನಿಂದ ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದಾರೆ. ಆದರೆ ಸರ್ಕಾರ ಕೇವಲ 30 ಸಾವಿರ ಮಂದಿ ಸಾವನ್ನಪ್ಪಿದಾರೆ ಎಂದು ವರದಿ ನೀಡಿದೆ. ಪರಿಹಾರ ನೀಡಬೇಕಾಗುತ್ತದೆ ಎಂದು ಸರ್ಕಾರ ಸಾವಿನ ಸಂಖ್ಯೆ ಕಡಿಮೆ ನೀಡುತ್ತಿದೆ. ಕೊರೋನಾದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಸರ್ಕಾರ ಐದು ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಸಲೀಂ ಅಹ್ಮದ್ ಒತ್ತಾಯಿಸಿದರು.

- Advertisement -

ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಒಬ್ಬ ದುರ್ಬಲ ಸಿಎಂ. ಹೈಕಮಾಂಡ್ ಗೆ ಸಿಎಂ ಮೇಲೆ ಭರವಸೆ ಇಲ್ಲ. ಮೂರನೇ ಅಲೆ ಮುನ್ಸೂಚನೆ ಇದ್ದರೂ ಇವರು ತಮ್ಮ ರಾಜಕೀಯ ಜಂಜಾಟದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಈ ಹಿಂದೆಯೇ ಸರ್ಕಾರಕ್ಕೆ ಎರಡನೇ ಅಲೆ ಬಗ್ಗೆ ಎಚ್ಚರಿಕೆ ನೀಡಿತ್ತು. ಈಗ ಮೂರನೇ ಅಲೆ ಇದೆ ರಾಜಕೀಯ ಜಂಜಾಟ ಬಿಟ್ಟು ಜನರ ಗಮನ ಹರಿಸಲಿ ಎಂದು ಅವರು ಆಗ್ರಹಿಸಿದರು.

Join Whatsapp