ಅಶ್ವಮೇಧ ಬಸ್‍ಗಳಿಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ

Prasthutha|

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮದ ಅಶ್ವಮೇಧ ಕ್ಲಾಸಿಕ್ ಹೊಸ ವಿನ್ಯಾಸದ ಬಸ್‍ಗಳಿಗೆ ಇಂದು (5.2.2024) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

- Advertisement -

KSRTCಯ ಅಶ್ವಮೇಧ ಹೊಸ ವಿನ್ಯಾಸದ 800 ಬಸ್‍ಗಳನ್ನು ಮೇ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಒದಗಿಸಲು ಉದ್ದೇಶಿಸಿಸಲಾಗಿದೆ. ಮೊದಲ ಹಂತದಲ್ಲಿ ಇಂದು ನೂರು ಬಸ್‍ಗಳಿಗೆ ವಿಧಾನಸೌಧ ಮುಂಭಾಗ ಚಾಲನೆ ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಎಸ್‍ಆರ್‍ಟಿಸಿಯ ಹಿರಿಯ ಅಕಾರಿಗಳು ಭಾಗವಹಿಸಲಿದ್ದಾರೆ ಎಂದು KSRTC ಪ್ರಕಟಣೆ ತಿಳಿಸಿದೆ.



Join Whatsapp