ಸಿಎಂ ಸಿದ್ದರಾಮಯ್ಯ ಬಯೋಪಿಕ್: ‘ಲೀಡರ್ ರಾಮಯ್ಯ’ ಆಗಿ ವಿಜಯ್ ಸೇತುಪತಿ

Prasthutha|

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರದ ಕಥೆಯ ಸಿನಿಮಾಗೆ ‘ಲೀಡರ್ ರಾಮಯ್ಯ’ ಎಂದು ಟೈಟಲ್ ಇಡಲಾಗಿದೆ. ಸಿದ್ಧರಾಮಯ್ಯ ರೋಲ್ ನಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ.

- Advertisement -


ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿ ಬರ್ತಿರೋ ಜೀವನ ಚರಿತ್ರೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೆರೆ ಮೇಲೆ ತರಲು ಸಿದ್ಧತೆ ನಡೆಸಲಾಗಿದೆ. ಈ ಸಿನಿಮಾ ರಾಜ್ಯದ 24 ನೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಜೀವನದ ಸುತ್ತ ಈ ಕತೆ ಸುತ್ತುತ್ತದೆ.


ಸತ್ಯ ರತ್ನಂ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಶಶಾಂಕ್ ಶೇಷಗಿರಿ ಮ್ಯೂಸಿಕ್ ಕಂಪೋಸಿಂಗ್ ಚಿತ್ರಕ್ಕಿದೆ. ಹಯತ್ ಪೀರ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣದಲ್ಲಿ ಬರುತ್ತಿದೆ. ಆಗಸ್ಟ್ ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಸಿದ್ಧತೆಯಲ್ಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿಯನ್ನು ಕರೆತರಲು ಬಹಳ ಉತ್ಸುಕರಾಗಿರುವ. ಈ ಚಿತ್ರ ತಂಡ ವಿಜಯ್ ಸೇತುಪತಿ ಕಾಲ್ ಶೀಟ್ ಗಾಗಿ ಕಾಯುತ್ತಿದೆ ಎನ್ನಲಾಗಿದೆ.

Join Whatsapp