ಮೊಬೈಲ್ ಚಾರ್ಜರ್ ಬಾಯಿಗೆ ಹಾಕಿದ ಮಗು: ವಿದ್ಯುತ್ ಶಾಕ್ ಹೊಡೆದು ಮೃತ್ಯು

Prasthutha|

ಕಾರವಾರ: ಮೊಬೈಲ್ ಚಾರ್ಜರ್ ರನ್ನು ಬಾಯಿಗೆ ಹಾಕಿದಾಗ ಶಾಕ್ ಹೊಡೆದು 8 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ.

- Advertisement -

ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ದಂಪತಿಗಳ 8 ತಿಂಗಳ ಮಗು ಸಾನಿಧ್ಯ ಮೃತ ಮಗು.


ಮೊಬೈಲ್ ಚಾರ್ಜ್ ಮಾಡಿದ ಬಳಿಕ ಪೋಷಕರು ಪ್ಲಗ್ ಅನ್ನು ಆಫ್ ಮಾಡದೇ ನಿರ್ಲಕ್ಷ್ಯವಹಿಸಿದ್ದರು.

- Advertisement -


ಮಗು ಆಟವಾಡುತ್ತಾ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿತ್ತು. ಇದರಿಂದಾಗಿ ಶಾಕ್ ಹೊಡೆದು ಮಗು ಸಾವನ್ನಪ್ಪಿದೆ.


ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp