ಬಿಜೆಪಿ ಜತೆ ಮೈತ್ರಿ: ಸಿಎಂ ಇಬ್ರಾಹಿಂ ಅಸಮಾಧಾನ ಶಮನಕ್ಕೆ ಯತ್ನಿಸಿದ ದೇವೇಗೌಡ

Prasthutha|

- Advertisement -

ಬೆಂಗಳೂರು: ಬಿಜೆಪಿ, ಜೆಡಿಎಸ್ ಮೈತ್ರಿ ಬಗ್ಗೆ ಆಯಾ ಪಕ್ಷದ ಕೆಲ ನಾಯಕರು ಈ ವಿರೋಧ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಬಿಜೆಪಿಯೊಂದಿಗೆ ದೋಸ್ತಿ ಬೆಳೆಸಿದ್ದಕ್ಕೆ ಅಸಮಾಧಾನ ಸ್ಫೋಟಗೊಂಡಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದ ನಾಯಕರು ದೇವೇಗೌಡ-ಕುಮಾರಸ್ವಾಮಿ ನಡೆಗೆ ಸಿಡಿದೆದ್ದಿದ್ದು, ಒಬ್ಬೊಬ್ಬರೇ ಪಕ್ಷ ತೊರೆಯುತ್ತಿದ್ದಾರೆ.

- Advertisement -

ಇನ್ನು ಮುಖ್ಯವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಹ ಅಸಮಾಧಾನಗೊಂಡಿದ್ದು, ಇದೀಗ ಖುದ್ದು ದೇವೇಗೌಡ ಅವರು ಅಖಾಡಕ್ಕಿಳಿದು ಇಬ್ರಾಹಿಂ ಮುಸಿಸು ಶಮನಕ್ಕೆ ಮುಂದಾಗಿದ್ದಾರೆ.

ಇಂದು(ಅ,01) ಇಬ್ರಾಹಿಂಗೆ ದೂರವಾಣಿ ಕರೆ ಮಾಡಿದ ದೇವೇಗೌಡ್ರು, ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ ತೋಟದ ಮನೆಯಲ್ಲಿ ನಡೆಯುವ ಸಭೆಗೆ ಬರುವಂತೆ ಆಹ್ವಾನ ಆಹ್ವಾನ ನೀಡಿದ್ದಾರೆ. ಆದ್ರೆ, ಇಬ್ರಾಹಿಂ ಅಸಮಾಧಾನಿತರ ಸಭೆಗೆ ಬರಲು ನಿರಾಕರಿಸಿದ್ದು, ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಮಾತಾಡುತ್ತೇನೆ ಎಂದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ಇಬ್ರಾಹಿಂ ಜೆಡಿಎಸ್​ ತೊರೆಯುವ ಸಾಧ್ಯತೆಗಳು ಹೆಚ್ಚಿವೆ.



Join Whatsapp