ಮೈಸೂರು: ಮಗಳನ್ನು ರಕ್ಷಿಸಲು ಹೋದ ತಂದೆ-ತಾಯಿ ಸೇರಿ ಮೂವರು ನೀರುಪಾಲು

Prasthutha|

- Advertisement -

ಮೈಸೂರು: ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ‌.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಪ್ಪ ಮಹಮ್ಮದ್ ಕಪೀಲ್ (42), ಅಮ್ಮ ಶಾವರ ಭಾನು (35), ಪುತ್ರಿ ಶಾಹೀರಾ ಭಾನು (20) ಮೃತ ದುರ್ದೈವಿಗಳು.

- Advertisement -

ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಅಪ್ಪ, ಅಮ್ಮನೂ ಸಾವನ್ನಪ್ಪಿದ್ದಾರೆ.

ಇನ್ನು ಅಜ್ಜಿಯ ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ಘಟನೆ ನಡೆದಿದೆ.

ಈ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ