ಬೆಂಗಳೂರು: ಕೋವಿಡ್ ನಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗಾಗಿ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಘೋಷಣೆ

Prasthutha|

ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿ ಪೋಷಕರನ್ನ ಕಳೆದುಕೊಂಡ ಮಕ್ಕಳಿಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಬಾಲಸೇವಾ ಯೋಜನೆಯನ್ನ ಘೋಷಣೆ ಮಾಡಿದ್ದಾರೆ.

- Advertisement -

ಯೋಜನೆ ಅನ್ವಯ ಕೋವಿಡ್ ನಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ ಮಾಸಿಕ 3500 ರೂ. ಸಹಾಯಧನ, ಕೋವಿಡ್ ನಿಂದ ಪೋಷಕರನ್ನ ಕಳೆದುಕೊಂಡ 10 ವರುಷದೊಳಗಿನ ಮಕ್ಕಳಿಗೆ ಬೇರೆ ಯಾರೂ ಪಾಲಕರಿಲ್ಲದಿದ್ದಲ್ಲಿ ಅಂತಹ ಮಕ್ಕಳನ್ನ ಪಾಲನಾ ಕೇಂದ್ರಕ್ಕೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಮಾದರಿ ವಸತಿ ಶಾಲೆಯಲ್ಲಿ ಶಿಕ್ಷಣ, 10ನೇ ತರಗತಿ ನಂತರದ ಮಕ್ಕಳಿಗೆ ಉನ್ನತ ಶಿಕ್ಷಣದ ಪ್ರೋತ್ಸಾಹಕ್ಕಾಗಿ ಲ್ಯಾಪ್ ಟಾಪ್, ಟ್ಯಾಬ್ ನೀಡಲು ನಿರ್ಧರಿಸಲಾಗಿದೆ.

ಇನ್ನು ಕೋವಿಡ್ ನಿಂದ ಪೋಷಕರ ಕಳೆದುಕೊಂಡ 21 ವರುಷ ತುಂಬಿದ ಹೆಣ್ಮಕ್ಕಳಿಗೆ ಮದುವೆ ಇಲ್ಲವೇ ಸ್ವ-ಉದ್ಯೋಗಕ್ಕಾಗಿ 1 ಲಕ್ಷ ರೂ. ನೆರವು, ಹಾಗೂ ಅನಾಥರಾದ ಮಕ್ಕಳಿಗೆ ಮಾರ್ಗದರ್ಶಿಯನ್ನ ನೇಮಿಸಿ ಅಂತಹ ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಚಟುವಟಿಕೆಗಳಿಗೆ ವಿವಿಧ ರೀತಿಯ ಸಹಾಯ ಒದಗಸಿಲಾಗುವುದು ಎಂದು ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

- Advertisement -

ಕೇಂದ್ರ ಸರಕಾರ ನೀಡಿದ ಸೂಚನೆ ಅನ್ವಯ ಅನಾಥ ಮಕ್ಕಳ ಪೋಷಣೆಗಾಗಿ ಮುಖ್ಯಮಂತ್ರಿ ಬಾಲಸೇವಾ ಯೋಜನೆ ಜಾರಿ ಮಾಡಲಾಗಿದೆ ಎಂದರು.  

Join Whatsapp