ಮಂಗಳೂರಿಗರ ಸೊಕ್ಕು ಮುರಿಯಲು ಕರಾವಳಿಗೆ ಪ್ರವಾಸ ನಿಲ್ಲಿಸಬೇಕು; ಕ್ಲಬ್ ಹೌಸ್ ಆಡಿಯೋ ವೈರಲ್

Prasthutha: June 29, 2021

ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸುವ ತನಕ ಮಂಗಳೂರಿನ ಜನರ ಸೊಕ್ಕು ಮುರಿಯೋದಿಲ್ಲ ಎಂಬ ಕ್ಲಬ್ ಹೌಸ್ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕರುನಾಡು ವರ್ಸಸ್ ತುಳುನಾಡು ಕ್ಲಬ್ ಹೌಸ್‌ನಲ್ಲಿ ನಡೆದಿರುವ ಚರ್ಚೆಯಲ್ಲಿ ಕರಾವಳಿಗೆ ಟ್ರಿಪ್ ಹೋಗುವುದನ್ನು ನಿಲ್ಲಿಸಬೇಕು. ನಮ್ಮಲ್ಲಿ ದೇವಸ್ಥಾನಗಳಿಲ್ವ , ಮನೆ ದೇವರು ಇಲ್ವ ? ಇದನ್ನು ಬಿಟ್ಟು ಧರ್ಮಸ್ಥಳ , ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ. ಅದನ್ನು ನಾವು ಕಡಿಮೆ ಮಾಡಬೇಕು ‘ ಎಂದು ಸದಸ್ಯರು ಹೇಳಿರುವುದು ಆಡಿಯೋದಲ್ಲಿದೆ.


‘ ಕನ್ನಡ ವಾಹಿನಿಗಳಲ್ಲಿ ಕರಾವಳಿಯ ಕೆಲವರು ಮೆರಿತಾ ಇದ್ದಾರೆ. ಅವರನ್ನು ಪ್ರೊಮೋಟ್ ಮಾಡುವುದನ್ನು ಕಡಿಮೆ ಮಾಡಬೇಕು ಎಂದಿರುವ ಕರುನಾಡು ಕ್ಲಬ್ ಹೌಸ್ ಗ್ರೂಪ್, ಅನುಶ್ರೀ ಎಂಟ್ರಿ ಆದ ಬಳಿಕ ತುಳುನಾಡಿನವರನ್ನು ಕ್ಲಬ್ ಹೌಸ್ ಗೆ ತುಂಬುತ್ತಿದ್ದಾರೆ ಎಂದಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ