8ನೇ ತರಗತಿ ವಿದ್ಯಾರ್ಥಿನಿಗೆ 8 ಬಾರಿ ಚೂರಿಯಿಂದ ಇರಿದ ಭಗ್ನಪ್ರೇಮಿ !

Prasthutha: December 23, 2021

ಬಿಹಾರ: ತನ್ನ ಜೊತೆ ಮಾತನಾಡಲು ನಿರಾಕರಿಸಿದ 8ನೇ ತರಗತಿ ವಿದ್ಯಾರ್ಥಿನಿಗೆ ಭಗ್ನಪ್ರೇಮಿಯೊಬ್ಬ 13 ಸೆಕೆಂಡ್’ಗಳ ಅಂತರದಲ್ಲಿ 8 ಬಾರಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬಿಹಾರದ ಗೋಪಾಲ್’ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಸಹಪಾಠಿಯರ ಜೊತೆ ಶಾಲೆಯಿಂದ ಮರಳುತ್ತಿದ್ದ ವೇಳೆ ರಸ್ತೆಬದಿಯಲ್ಲಿ ಸ್ನೇಹಿತರ ಜೊತೆ ಕಾದು ಕುಳಿತಿದ್ದ ಗುಲ್ಶನ್ ಎಂಬಾತ ಏಕಾಏಕಿ ವಿದ್ಯಾರ್ಥಿನಿಯ ಮೇಲೆ ದಾಳಿ ಮಾಡಿ, ಆಕೆಯನ್ನು ರಸ್ತೆ ಮಧ್ಯದಲ್ಲಿಯೇ ನೆಲಕ್ಕುರುಳಿಸಿ ಚಾಕುವಿನಿಂದ ಇರಿದಿದ್ದಾನೆ. ಈ ದೃಶ್ಯವು ಸಮೀಪದಲ್ಲಿದ್ದ CCTVಯಲ್ಲಿ ದಾಖಲಾಗಿದ್ದು, ಇದೀಗ ವೈರಲ್ ಆಗಿದೆ.

ಗೋಪಾಲ್’ಗಂಜ್ ಜಿಲ್ಲೆಯ ಪ್ರತಾಪ್’ಪುರ್ ಗ್ರಾಮದ ಶಾಲೆಯ ವಿದ್ಯಾರ್ಥಿನಿ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಆರೋಪಿ ಗುಲ್ಶನ್ ತನ್ನ ಬಳಿ ಮಾತನಾಡುವಂತೆ ಒತ್ತಾಯ ಮಾಡಿದ್ದಾನೆ. ಆದರೆ ಆತನ ಮಾತಿಗೆ ತಲೆಕೆಡಿಸಿಕೊಳ್ಳದ ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದಾಳೆ. ಇದರಿಂದ ಕೋಪಗೊಂಡ ಗುಲ್ಶನ್ ಸಂಜೆ ಆಕೆ ಶಾಲೆ ಬಿಟ್ಟು ಬರುವ ದಾರಿಯಲ್ಲಿ ಕಾದು ಕುಳಿತು ದಾಳಿ ಮಾಡಿದ್ದಾನೆ. ವಿದ್ಯಾರ್ಥಿನಿಯನ್ನು ಮೊದಲಿಗೆ ಗೋಪಾಲ್’ಗಂಜ್’ನ ಸರ್ಧಾರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆಯ ಸ್ಥಿತಿ ಗಂಭೀರವಾದುದರಿಂದ ಆ ಬಳಿಕ  ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. 

ಸೋಷಿಯಲ್ ಜಸ್ಟಿಸ್ ಆರ್ಮಿ ಆಫ್ ಇಂಡಿಯಾ (SJAI) ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ‘ಬಾಲಕಿಯರು ಈಗ ಸುರಕ್ಷಿತರಲ್ಲ’ ಎಂದು ಕ್ಯಾಪ್ಶನ್ ಕೊಡಲಾಗಿದೆ. CCTV ದೃಶ್ಯಗಳ ಆಧಾರದಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!