5ನೇ ತರಗತಿಯ ವಿದ್ಯಾರ್ಥಿನಿಯನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದ ಟೀಚರ್!

Prasthutha|

ನವದೆಹಲಿ: ದೆಹಲಿಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಥಳಿಸಿ ಬಾಲ್ಕನಿಯಿಂದ ಕೆಳಕ್ಕೆಸೆದ ಆಘಾತಕಾರಿ ಘಟನೆ ನಡೆದಿದೆ.

- Advertisement -


ದೆಹಲಿಯ ಕರೋಲ್’ಬಾಗ್’ನಲ್ಲಿಯ ಬಾಲಿಕಾ ವಿದ್ಯಾಲಯದಲ್ಲಿ ಶಿಕ್ಷಕಿ ಗೀತಾ ಅವರು ಶುಕ್ರವಾರ ಬಾಲಕಿಯನ್ನು ಬಾಲ್ಕನಿಯಿಂದ ಕೆಳಕ್ಕೆಸೆದು ಶಿಕ್ಷಣದ ಇಂದಿನ ಸ್ಥಿತಿಗತಿಯನ್ನು ಪ್ರಸ್ತುತ ಪಡಿಸಿದ್ದಾರೆ.


ತೀವ್ರವಾಗಿ ಗಾಯಗೊಂಡಿರುವ ವಂದನಾ ಎಂಬ ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಆಕೆಯ ಸ್ಥಿತಿ ಕಳವಳಕಾರಿಯಾಗಿದೆ ಎಂದು ತಿಳಿದು ಬಂದಿದೆ.
ಗೀತಾ ಎಂಬ ಆ ಶಿಕ್ಷಕಿಯನ್ನು ಬಂಧಿಸಲಾಗಿದೆ. ಈ ವಿದ್ಯಾಲಯದ ಟೀಚರುಗಳು ಬಾಲಕಿಯರಿಗೆ ಸದಾ ಹೊಡೆಯುತ್ತಿರುತ್ತಾರೆ ಎಂದು ಪೋಷಕರು ಪೊಲೀಸರಿಗೆ ಈಗ ದೂರು ನೀಡಿದ್ದಾರೆ.

Join Whatsapp