ಹಕ್ಕುಪತ್ರ ಆರೋಪ ಸತ್ಯಕ್ಕೆ ದೂರವಾದುದು: ಮೊಯ್ದಿನ್ ಬಾವಾ ಸ್ಪಷ್ಟನೆ

Prasthutha|

ಮಂಗಳೂರು: ಹತ್ತೊಂಬತ್ತು ಸಾವಿರ ರೂಪಾಯಿ ಪಡೆದು ನಕಲಿ ಹಕ್ಕುಪತ್ರ ನೀಡಿ ವಂಚಿಸಿದ್ದೇನೆ ಎಂದು ಕೃಷ್ಣಾಪುರದ ಕೆಲವು ನಿವಾಸಿಗಳು ಹೇಳಿಕೆ ನೀಡಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕನಾಗುವ ಭಾಗ್ಯ ನನಗೆ ಸಿಕ್ಕಿತ್ತು. ಈ ವೇಳೆ ಎಲ್ಲಾ ಜಾತಿ ಮತ ಧರ್ಮದವರನ್ನು ಸಮಾನವಾಗಿ ಕಂಡು ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಯಾರನ್ನೂ ತಾರತಮ್ಯದಿಂದ ನೋಡಿಲ್ಲ. ಹಾಲಿ ಶಾಸಕ ಭರತ್ ಶೆಟ್ಟಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಿದ್ದಾಗಿ ಹೇಳಿದ್ದಾರೆ. ಆದರೆ ಆಪಾದನೆ ಮಾಡಿದವರಿಗೆ ಹಕ್ಕುಪತ್ರಗಳನ್ನು ಕಾಗೋಡು ತಿಮ್ಮಪ್ಪ ಸಚಿವರಾಗಿದ್ದಾಗ ನೀಡಲಾಗಿದೆ. ಆದರೆ ಕಳೆದು ಹೋದ ಪ್ರತಿಯನ್ನು ಭರತ್ ಶೆಟ್ಟಿ ಮತ್ತೆ ಕೊಡಿಸಿ ನಾನೇ ಹಕ್ಕು ಪತ್ರ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದನ್ನು ಪ್ರಕಟಿಸಿದ ಪತ್ರಿಕೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ  ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಬಾವಾ ಎಚ್ಚರಿಸಿದರು.

ನನ್ನ ಸಹೋದರ ಶಾಸಕ ಫಾರೂಕ್ ಅವರ ಅನುದಾನದಲ್ಲಿ ಒಂದು ಕೋಟಿ ರೂ. ಅನ್ನು ನನ್ನ ಕ್ಷೇತ್ರಕ್ಕೆ ತಂದು ನಮ್ಮ ಕ್ಷೇತ್ರದ ಹಲವಾರು ಆಲಯ, ದೈವಸಾನ, ಮಸೀದಿಗಳಿಗೆ ಅನುದಾನ ಕೊಡಿಸಿದ್ದೇನೆ. ಯಾರನ್ನೂ ತಾರತಮ್ಯದಿಂದ ಕಂಡಿಲ್ಲ ಎಂದು ಬಾವಾ ಇದೇ ವೇಳೆ ವಿವರಿಸಿದರು.

- Advertisement -

ಸರ್ವೆ ಪ್ರಕಾರ ನನಗೇ ಸುರತ್ಕಲ್ ಕ್ಷೇತ್ರದಿಂದ ಪಕ್ಷದ ಟಿಕೆಟ್ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಬಾವಾ ಉತ್ತರಿಸಿದರು.

Join Whatsapp