ಕರ್ನಾಟಕ ಸೇರಿ 9 ರಾಜ್ಯಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Prasthutha|

ರಾಹುಲ್ ಗಾಂಧಿ ವಯನಾಡ್‌ನಿಂದಲೇ ಸ್ಪರ್ಧೆ

- Advertisement -

ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟ

ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಕರ್ನಾಟಕ ಸೇರಿ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

- Advertisement -

ಎಐಸಿಸಿ ಕಚೇರಿಯಲ್ಲಿ ಇಂದು ರಾತ್ರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಅಜಯ್ ಮಾಕೆನ್ ಮತ್ತು ಪವನ್ ಖೇರ್ ಅವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು

ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಲಿದ್ದಾರೆ. ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ ಸ್ಪರ್ಧಿಸಲಿದ್ದಾರೆ.ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಕಣ್ಣೂರಿನಿಂದ ಸ್ಪರ್ಧಿಸಲಿದ್ದಾರೆ. ಡಾ.ಶಶಿ ತರೂರ್ ತಿರುವನಂತಪುರಂ‌ನಿಂದ ಮತ್ತೆ ಕಣಕ್ಕಿಳಿಯಲಿದ್ದಾರೆ. ಕೆ.ಸಿ.ವೇಣುಗೋಪಾಲ್ ಆಲಪ್ಪುಝದಿಂದ ಕಣಕ್ಕಿಳಿಯಲಿದ್ದಾರೆ. ಕಾಸರಗೋಡಿನಿಂದ ರಾಜ್ ಮೋಹನ್ ಅಭ್ಯರ್ಥಿಯಾಗಿದ್ದಾರೆ.

ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡ ಕರ್ನಾಟಕದ ಅಭ್ಯರ್ಥಿಗಳು:

ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್ , ವಿಜಯಪುರ(SC)-ರಾಜು ಅಲಗೂರು, ಹಾವೇರಿ- ಆನಂದ ಸ್ವಾಮಿ ಗಡ್ಡದೇವರಮಠ, ತುಮಕೂರು- ಮುದ್ದಹನುಮೇಗೌಡ, ಮಂಡ್ಯ- ಸ್ಟಾರ್ ಚಂದ್ರು (ವೆಂಕಟರಾಮೇಗೌಡ)
ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್, ಹಾಸನ- ಶ್ರೇಯಸ್ ಪಟೇಲ್



Join Whatsapp