ಬಜಪೆ | ಮೂಲ ಸೌಕರ್ಯಗಳ ಕೊರತೆಗಳಿಂದ ಸಾಗುವ ರಸ್ತೆಗೆ ನಾಗರಿಕರ ವಿರೋಧ: ನಾಗರಿಕರಿಂದ ಹೋರಾಟಕ್ಕೆ ಸಿದ್ಧತೆ

Prasthutha|

ಮಂಗಳೂರು: ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮುಖ್ಯ ರಸ್ತೆಯು ಚತುಷ್ಪಥ ರಸ್ತೆಯ ನಕಾಶೆ ಸಿದ್ದವಾಗಿದ್ದರೂ ಅದನ್ನು ಸಮರ್ಪಕವಾಗಿ ಮುಂದುವರಿಸದ ಬಹಿರಂಗ ವಂಚನೆ ನಡೆದಿದ್ದು ಮಾತ್ರವಲ್ಲ ನಿರ್ಮಾಣವಾಗಿರುವ ರಸ್ತೆ ಕಳಪೆ ಕಾಮಗಾರಿಕೆಯಿಂದ ಕೂಡಿದ್ದು , ಮಾತ್ರವಲ್ಲ ಪಟ್ಟಣ ಪಂಚಾಯತ್ ಆಗಿ ಪರಿವರ್ತನೆ ಆದ ನಂತರ ಮೂಲಭೂತ ಸೌಕರ್ಯ  ಹಾಗು ಇನ್ನಿತರ  ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ.

- Advertisement -

ಈ ಸಮಸ್ಯೆಗಳ ಬಗ್ಗೆ ಹಲವಾರು ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಹಲವು ಭಾರಿ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಸಮಸ್ಯೆಗಳಿಗೆ ಉತ್ತರ ಲಭಿಸುತ್ತಿಲ್ಲ. ಅಧಿಕಾರಿಗಳು ಬೇರೆ ಉದ್ದಟತನದಿಂದ ವರ್ತಿಸುತ್ತಿದ್ದಾರೆ.

   ಈ ಬಗ್ಗೆ ಎಚ್ಚೆತ್ತ  ಬಜಪೆ ಪ್ರದೇಶದ ನಾಗರಿಕರು ಸೂಕ್ತ ಕ್ರಮಕ್ಕೆ ಹೋರಾಟ ನಡೆಸಲು ಇತ್ತೀಚೆಗೆ ಸಭೆ ಸೇರಿ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.

- Advertisement -

   ಬಜಪೆ ವ್ಯಾಪ್ತಿಯಲ್ಲಿ ಕಸದ ರಾಶಿ, ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಹಲವಾರು ಸಮಸ್ಯೆಗಳನ್ನು ಮನಗಂಡು ಬಜಪೆ ವ್ಯಾಪ್ತಿಯ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ  ಪದಾಧಿಕಾರಿಗಳು ಒಂದೆಡೆ ಸೇರಿ ಬಜಪೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಿದ್ದಾರೆ.

   ಅದರ ಭಾಗವಾಗಿ ಬಜಪೆಯ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಬಜಪೆ ನಾಗರಿಕ ಹಿತರಕ್ಷಣಾ ವೇದಿಕೆ ಎಂಬ ವೇದಿಕೆ*ಯನ್ನು ಸಿದ್ಧಪಡಿಸಿಕೊಂಡು ಬಜಪೆ ಪ್ರದೇಶದಲ್ಲಿರುವ ಎಲ್ಲಾ ಸಮಸ್ಯೆಗಳಿಗೆ  ವೇದಿಕೆ ಮೂಲಕ ಪರಿಹಾರ ಕಂಡುಕೊಳ್ಳಲು ತೀರ್ಮಾನಿಸಲಾಯಿತು.

  ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿ ಸಿರಾಜ್ ಮದನಿ ಹಾಗೂ ಸಹ ಸಂಚಾಲಕರಾಗಿ ಇಸ್ಮಾಯಿಲ್ ಇಂಜಿನಿಯರ್ ರವರು ಆಯ್ಕೆಯಾದರು

  ಸಮಿತಿ ಸದಸ್ಯರುಗಳಾಗಿ ಡಾ.ಶೇಖರ್ ಪೂಜಾರಿ, ಹನೀಫ್ ಹಿಲ್ ಟಾಪ್, ಸಾಹುಲ್ ಹಮೀದ್, ಸಲೀಲ್ ಡಿಲಕ್ಸ್, ರಾಜೇಶ್ ಪೂಜಾರಿ, ಅಥಾವುಲ್ಲಾ ಜೋಕಟ್ಟೆ, ಶರೀಫ್ ಬಜ್ಪೆ, ಹಸೈನಾರ್, ಮುಫೀದ್ ರಹ್ಮಾನ್, ಇರ್ಷಾದ್ ಬಜ್ಪೆ, ಬಶೀರ್ ನಿಡುವಾಳೆ, ನಿಸಾರ್ ಕರಾವಳಿ, ರಹೀಂ ಕಳವಾರು, ನೌಶಾದ್, ನಝೀರ್ ಕೆ.ಪಿ.,  ಇಬ್ರಾಹಿಂ ಆಲ್ದೂರು, ರಫೀಕ್ ಸಾಗರ್, ಶಕೀರ್, ಮೋನಾಕ, ಇಮ್ರಾನ್ ಬಜ್ಪೆ, ರಿಯಾಝ್, ಅಶ್ರಫ್, ಆರಿಫ್, ಮುಂತಾದವರನ್ನು ಆಯ್ಕೆ ಮಾಡಲಾಯಿತು.

   ಈ ಸಂಧರ್ಭದಲ್ಲಿ ಬಜಪೆ ಕೇಂದ್ರ ಮಸೀದಿಯ ಅಧ್ಯಕ್ಷರಾದ ಅಬ್ದುಲ್‌ ಖಾದರ್, ಕಿನ್ನಿಪದವು ಮಸೀದಿಯ ಕಾರ್ಯದರ್ಶಿ ಹನೀಫ್, ಶಾಫಿ ಹಾಗೂ ಹತ್ತು ಹಲವು ಊರಿನ ಹಿರಿಯ ವ್ಯಕ್ತಿಗಳು ಹಾಜರಿದ್ದರು



Join Whatsapp