ಹಳಿ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲು

Prasthutha|

ಕಾಂಚೀಪುರಂ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಎಸ್ ಎಐಎಲ್)ಗೆ ಸ್ಟೀಲ್ ಲೋಡ್ ಸಾಗಿಸುತ್ತಿದ್ದ ಸರಕು ರೈಲು ಹಳಿತಪ್ಪಿದ್ದು, ವ್ಯಾಗನ್ ಹಳಿ ಮೇಲೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -


ಯಾವುದೇ ಗಾಯಗಳಾಗಿಲ್ಲ. ರೈಲು ಬಳ್ಳಾರಿಯಿಂದ ತಮಿಳುನಾಡಿನ ಕಾಂಚೀಪುರಂಗೆ ತೆರಳುತ್ತಿತ್ತು. ಘಟನೆಯಲ್ಲಿ ಕೆಲವು ಬೈಕ್ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Join Whatsapp