ದುಬೈ: ಟೂರ್ನಿಯಲ್ಲಿ ಸತತ ಸೋಲನುಭವಿಸಿ ಕಂಗಾಲಾಗಿರುವ ಪಂಜಾಬ್ ಕಿಂಗ್ಸಿಗೆ ಮತ್ತೊಂದು ದೊಡ್ಡ ಆಘಾತವಾಗಿದೆ. ತಂಡದ ಸ್ಪೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಟೂರ್ನಿಯಿಂದ ದಿಢೀರನೆ ಹೊರ ನಡೆದಿದ್ದಾರೆ. ಈ ಬಗ್ಗೆ ಸ್ವತ ಪಂಜಾಬ್ ಕಿಂಗ್ಸ್ ಸ್ವತಹ ತನ್ನ ಟ್ವಿಟರ್ ಖಾತೆಯಲ್ಲಿ ದೃಡಪಡಿಸಿದ್ದು ಮುಂಬರುವ ಪಂದ್ಯಗಳಿಗೆ ಕ್ರಿಸ್ ಗೇಲ್ ಅಲಭ್ಯವಾಗಲಿದ್ದಾರೆ ಎಂದು ಹೇಳಿದೆ.
ಇಂದು ನಡೆಯಲಿರುವ ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಾಟಕ್ಕೂ ಕ್ರಿಸ್ ಗೇಲ್ ಲಬ್ಯವಿರುವುದಿಲ್ಲ ಎನ್ನಲಾಗಿದೆ. ಬಯೋಬಬಲ್ ಆಯಾಸದಿಂದ ಐಪಿಎಲ್ ನಿಂದ ಹೊರಗುಳಿಯುವುದಾಗಿ ಗೇಲ್ ತಿಳಿಸಿದ್ದಾರೆ, ನಾನೀಗ ಮಾನಸಿಕವಾಗಿ ಬಲಗೊಳ್ಳುವ ಉದ್ದೇಶದಿಂದ ಹಾಗೂ ಮುಂಬರುವ ವಿಶ್ವಕಪ್ ಟಿ-20 ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗಲು ಐಪಿಎಲ್ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಫಾರ್ಮ್ ಸಮಸ್ಯೆಯನ್ನು ಅನುಭವಿಸುತ್ತಿರುವ ಗೇಲ್ ಈ ಸೀಸನ್ ನ ಎರಡನೇ ಚರಣದಲ್ಲಿ ಕೇವಲ 15ರನ್ ಅಷ್ಟೆ ಗಳಿಸಲು ಶಕ್ತರಾಗಿದ್ದರು, ಅಲ್ಲದೇ ಗೇಲ್ ಅವರ ನಿರ್ಧಾರವನ್ನು ಗೌರವಿಸುವುದಾಗಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.