ಅಕ್ಸಾಯಿ ಚಿನ್ ನಲ್ಲಿ ಹೊಸ ಹೆದ್ದಾರಿಗೆ ಚೀನಾ ಯೋಜನೆ

Prasthutha|

ನವದೆಹಲಿ: ವಿವಾದಿತ ಅಕ್ಸಾಯಿ ಚಿನ್ ಪ್ರದೇಶದಲ್ಲಿ ದೇಶದ ಎರಡನೆಯ ಅತಿ ದೊಡ್ಡ ಜಿ695  ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಚೀನಾ ಯೋಜನೆ ಹಾಕಿದೆ. ಅದನ್ನು 2035ರೊಳಗೆ ಮುಗಿಸುವ ಗುರಿ ಹೊಂದಿದೆ. 1950ರಲ್ಲೇ ಆರಂಭಿಸಿ ಮುಗಿಸಿದ ಜಿ219 ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಭಾರತದ್ದೆನ್ನುವ ಚೀನಾದ ಅಕ್ಸಾಯಿ ಚಿನ್ ಪ್ರದೇಶದಲ್ಲಿದೆ.

- Advertisement -

ಜಿ695 ಚೀನಾದ ಹತೋಟಿಯಲ್ಲಿರುವ ಭಾರತ ತನ್ನದೆನ್ನುವ 38,000 ಚಕಿಮೀ ವಿವಾದಿತ ಪ್ರದೇಶದಲ್ಲಿ ಆಗುತ್ತಿದೆ.

ಹೊಸ ಹೆದ್ದಾರಿ ಬಗ್ಗೆ ಹಾಂಗ್ ಕಾಂಗ್ ನ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಇದು ಹಿಂದಿನದಕ್ಕಿಂತಲೂ ಗಡಿ ರೇಖೆಯ ಪಕ್ಕದಲ್ಲಿ ನಿರ್ಮಾಣ ಕಾಣುತ್ತಿದೆ. ಕ್ಸಿಂಜಿಯಾಂಗ್ ಉತ್ತರದ ಮಾಜಾದಿಂದ ಈ ಹೆದ್ದಾರಿ ಅಕ್ಸಾಯಿ ಚಿನ್ ಗೆ ಬರುತ್ತದೆ. ಕ್ಸಿಂಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದ ಆಡಳಿತವು ಈ ಪ್ರದೇಶದ ಮೇಲಿದೆ. ಭಾರತ, ಭೂತಾನ್, ನೇಪಾಳ ಗಡಿ ಆಚೆ ಅರುಣಾಚಲದ ಗಡಿವರೆಗೆ ಎಂದರೆ ದಕ್ಷಿಣ ಟಿಬೆಟ್ ನ ಲುಂಜೆವರೆಗೆ ಈ ಹೆದ್ದಾರಿ ಬರುತ್ತದೆ.

- Advertisement -

ವರದಿಯಲ್ಲಿ ಹೊಸ ಹೆದ್ದಾರಿಯ ಭೂಪಟ ಬಿಡುಗಡೆ ಆಗಿಲ್ಲ; ಆದರೆ ದಾರಿಯನ್ನು ಊರುಗಳ ಮೂಲಕ ವಿವರಿಸಲಾಗಿದೆ. ಅಕ್ಸಾಯಿ ಚಿನ್ ನ ಉದ್ದಕ್ಕೆ ಅಡ್ಡ ಹಾಯುವ ಈ ಹೆದ್ದಾರಿಯು ಭಾರತದ ಜೊತೆಗೆ ವಿವಾದವಿರುವ ಪೂರ್ವ ಲಡಾಕ್ ದೋಕ್ಲಾಮಿಗೆ ಹತ್ತಿರವಾಗಿ, ಭಾರತ- ಚೀನಾ- ಭೂತಾನ್ ನ ಮುಮ್ಮೂಲೆ, ದೆಪ್ಸಾಂಗ್ ಬಯಲು, ಗಾಲ್ವಾನ್ ಕಣಿವೆ ಮೊದಲಾದ ಗಡಿಯೆಡೆಯ ವಿವಾದದ ನಡುವೆ ಮುಂದುವರಿಯುತ್ತದೆ ಎನ್ನಲಾಗಿದೆ.

ಬೀಜಿಂಗ್ ಈ ವಾರ ಹೊಸ ಹೆದ್ದಾರಿ ಯೋಜನೆ ಪ್ರಕಟಿಸಿದ್ದು, ಅದರಲ್ಲಿ 4,61,000 ಕಿಮೀ ಹೊಸ ಹೆದ್ದಾರಿ ನಿರ್ಮಿಸಲು ಉದ್ದೇಶಿಸಿದೆ. ಅದರಲ್ಲಿ ಅಕ್ಸಾಯಿ ಚಿನ್ ಹಾಯುವ ಹೆದ್ದಾರಿ ಸಹಿತ 1,62,000 ಎಕ್ಸ್ ಪ್ರೆಸ್ ವೇಗಳಾಗಿವೆ. 2,99,000 ಸಾವಿರ ಕಿಮೀ ಪ್ರಾಂತೀಯ ಸಂಪರ್ಕದ ಹೆದ್ದಾರಿಗಳಾಗಿವೆ.



Join Whatsapp