ದಕ್ಷಿಣ ಚೀನಾ ಸಮುದ್ರದಲ್ಲಿ ಸೇನಾನೆಲೆ ಸ್ಥಾಪಿಸಿದ ಚೀನಾ; ಆತಂಕದಲ್ಲಿ ಅಮೆರಿಕಾ

Prasthutha|

ವಾಷಿಂಗ್ಟನ್: ಚೀನಾ ದೇಶವು ದಕ್ಷಿಣ ಚೀನಾ ಸಮುದ್ರದಲ್ಲಿ ಮೂರು ಕೃತಕ ದ್ವೀಪಗಳನ್ನು ನಿರ್ಮಿಸಿದ್ದು, ಅವುಗಳನ್ನು ತನ್ನ  ಸೇನಾನೆಲೆಯನ್ನಾಗಿ ಮಾರ್ಪಾಡುಮಾಡಿಕೊಂಡಿದೆ ಎಂದು ಅಮೆರಿಕ ಆರೋಪಿಸಿದೆ.

- Advertisement -

ಈ ಕೃತಕ ದ್ವೀಪಗಳಲ್ಲಿ ಚೀನಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳನ್ನು ಇರಿಸಿದ್ದು. ಅಲ್ಲಿ ಚೀನಾ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಸೇನೆಯನ್ನು ನಿಯೋಜಿಸಿದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ.

ಚೀನಾದ ಈ ನಡೆ ಪೆಸಿಫಿಕ್ ರಾಷ್ಟ್ರಗಳನ್ನು ಆತಂಕಕ್ಕೀಡುಮಾಡಿದ್ದು, ಎರಡನೇ ವಿಶ್ವಮಹಾಯುದ್ಧದ ನಂತರ ಪೆಸಿಫಿಕ್ ಸಾಗರದಲ್ಲಿ ಈ ಮಟ್ಟಿಗಿನ ಸೇನಾ ನಿಯೋಜನೆ ಆಗಿಯೇ ಇಲ್ಲ ಎಂದು ಅಮೆರಿಕ ಹೇಳಿದೆ.

Join Whatsapp