‘ನಮ್ಮ ತಂದೆ ಯಾವಾಗ ಬರುತ್ತಾರೆ ಎಂದು ಮಕ್ಕಳು ಪ್ರಶ್ನಿಸುತ್ತಿದ್ದಾರೆ’

Prasthutha|

ಪತ್ರಿಕಾಗೋಷ್ಠಿಯಲ್ಲಿ ಗದ್ಗತಿತರಾದ ಅತೀಕುರ್ರಹ್ಮಾನ್ ಪತ್ನಿ – ಕಣ್ಣೀರಿಟ್ಟ ತಾಯಿ

- Advertisement -

ನವದೆಹಲಿ: ನನ್ನ ಪತಿ ಅತೀಕುರ್ರಹ್ಮಾನ್ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಅವರನ್ನು ನೋಡಲು ಆಸ್ಪತ್ರೆಗೆ ಹೋದಾಗ ಅವರು ಮೃತದೇಹದಂತೆ ಮಲಗಿದ್ದರು. ಅವರಿಗೆ ನಮ್ಮ ಬಳಿ ಮಾತನಾಡಲೊ, ನಮ್ಮನ್ನು ಗುರುತಿಸಲೋ ಸಾಧ್ಯವಾಗಿಲ್ಲ ಎಂದು ಬಂಧಿತ ಅತೀಕುರ್ರಹ್ಮಾನ್ ಪತ್ನಿ ಸಂಜಿದಾ ರಹ್ಮಾನ್ ಹೇಳಿದ್ದಾರೆ.

- Advertisement -

ದೆಹಲಿಯ ಪ್ರೆಸ್‌ಕ್ಲಬ್‌ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಕ್ಕಳು ತಂದೆ ಯಾವಾಗ ಬರುತ್ತಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಅವರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ ಎಂದು ಗದ್ಗತಿರಾದರು. ನೀವೆಲ್ಲರೂ ಅತೀಕುರ್ರಹ್ಮಾನ್ ಪರವಾಗಿ ಧ್ವನಿ ಎತ್ತಿಬೇಕಿದ್ದು, ಅವರಿಗೆ ನ್ಯಾಯ ದೊರಕಿಸಲು ಸಹರಿಸಬೇಕಿದೆ ಎಂದರು.

ಅತೀಕುರ್ರಹ್ಮಾನ್ ತಾಯಿ ರಾಬಿಯಾ ಮಾತನಾಡಿ, ತಮ್ಮ ಮಗನ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟರು. “ನನ್ನ ಮಗ ಬಾಲ್ಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದನು. ಅವನಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಅವನು ಯಾವುದೇ ತಪ್ಪು ಮಾಡಿಲ್ಲ. ಆದರೂ ಅವನು ಇನ್ನೂ ಜೈಲಿನಲ್ಲಿದ್ದಾನೆ. ಆರೋಗ್ಯ ಸ್ಥಿತಿ ಶೋಚನೀಯವಾಗಿದ್ದರೂ ಅವನನ್ನು ಜೈಲಿಗೆ ಹಿಂದಿರುಗಿಸಲಾಗಿದೆ. ಇದು ಅಮಾನವೀಯವಾಗಿದೆ” ಎಂದು ರಾಬಿಯಾ ಹೇಳಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ನಂದಿತಾ ನರೇನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಘಟಕದ ಅಧ್ಯಕ್ಷೆ ಫೌಜಿಯಾ, ಕಾರ್ಯದರ್ಶಿ ಝಕಿ ಹಮ್ದಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

2020ರಲ್ಲಿ ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಜೊತೆ ಹತ್ರಾಸ್‌ಗೆ ತೆರಳುತ್ತಿದ್ದ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್‌ನನ್ನು ಉತ್ತರ ಪ್ರದೇಶ ಪೊಲೀಸರು ಯುಎಪಿಎ ದಾಖಲಿಸಿ ಬಂಧಿಸಿದ್ದರು.

Join Whatsapp