ಆಟವಾಡುತ್ತಾ ಬಾವಿಗೆ ಬಿದ್ದು ಮಗು ಮೃತ್ಯು

Prasthutha|

- Advertisement -

ಕಾರವಾರ: ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಗು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿ.ಪಿ. ಬಜಾರದಲ್ಲಿ ನಡೆದಿದೆ.

ಅನುಶ್ರೀ ರಾಜಶೇಖರ ಶೆಟ್ಟರ್ (2) ಮೃತ ಬಾಲಕಿ.

- Advertisement -

ಮಗು ಆಟವಾಡುತ್ತ ನೇರವಾಗಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ತಾಯಿ ಸಹಾಯಕ್ಕಾಗಿ ಕೂಗಿದ್ದಾರೆ. ಸ್ಥಳೀಯರಾದ ಶಂಭು ಶೆಂಮಡಿ ಎಂಬವರು ಕೂಡಲೇ ಬಾವಿಗೆ ಇಳಿದು ಮಗುವನ್ನು ಹೊರಕ್ಕೆ ತೆಗೆದಿದ್ದಾರೆ. ಆದರೆ ಆಕೆ ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.




Join Whatsapp