ಪಿಎಫ್’ಐ ನಂಟು ಆರೋಪ: ಬಂಧಿತ ವಕೀಲರಿಗೆ ಜಾಮೀನು ನೀಡಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬಂಧಿಸಲ್ಪಟ್ಟ ಮಧುರೈ ಮೂಲದ ವಕೀಲ ಮೊಹಮ್ಮದ್ ಅಬ್ಬಾಸ್ ಅವರಿಗೆ ಜಾಮೀನು ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.

- Advertisement -

ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನೊಳಗೊಂಡ ನ್ಯಾಯಪೀಠವು ಅಬ್ಬಾಸ್ ಅವರ ಜಾಮೀನು ಅನ್ನು ದೃಢಪಡಿಸಿತು ಮತ್ತು ಅವರು ಜಾಮೀನು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಒತ್ತಿ ಹೇಳಿದರು. ಜಾಮೀನು ಆದೇಶದಲ್ಲಿ ಮಾಡಿದ ಅವಲೋಕನಗಳು ನಡೆಯುತ್ತಿರುವ ವಿಚಾರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಬಂಧಿತ ಅಬ್ಬಾಸ್ ಗೆ ಮದ್ರಾಸ್ ಹೈಕೋರ್ಟ್ ಆಗಸ್ಟ್ 2 ರಂದು ಜಾಮೀನು ನೀಡಿತ್ತು. ಆದಾಗ್ಯೂ, ಆಗಸ್ಟ್ 3 ರಂದು, ಅಬ್ಬಾಸ್ ವಿರುದ್ಧ ದಾಖಲಾದ ಇತರ ಎರಡು ಎಫ್ಐಆರ್ ಗಳ ಆಧಾರದ ಮೇಲೆ ಅವರನ್ನು ಮತ್ತೆ ಬಂಧಿಸಲಾಯಿತು.

- Advertisement -