ಚಿಕ್ಕಮಗಳೂರು : ಆನೆ ಕಾಟ ತಾಳಲಾರದೆ ಮೇಲಾಧಿಕಾರಿಗಳಿಗೆ ಪತ್ರ ಬರೆದ ಶಾಸಕ

Prasthutha|

ಚಿಕ್ಕಮಗಳೂರು: ಆನೆ ಉಪಟಳಕ್ಕೆ ಬೇಸತ್ತು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

- Advertisement -

ಕಾವೇರಿ ಟಸ್ಕರ್ ಎಂಬ ಆನೆ ಕೊಪ್ಪ ತಾಲೂಕಿನಲ್ಲಿ ದಾಂಧಲೆ ಎಬ್ಬಿಸುತ್ತಿದ್ದು, ಜನ ಸಾಮಾನ್ಯರು ಈ ಬಗ್ಗೆ ಶಾಸಕರಲ್ಲಿ ಅವಲತ್ತುಕೊಳ್ಳುತ್ತಿದ್ಧಾರೆ. ಆನೆ ದಾಳಿಯಿಂದಾಗಿ ಹಲವು ಹಳ್ಳಿಗಳಲ್ಲಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಆನೆ ಹಾವಳಿಯಿಂದ ಕಂಗೆಟ್ಟ ಶಾಸಕರು,  ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವನ್ಯಜೀವಿ ವಿಭಾಗದ ಉನ್ನತ ಅಧಿಕಾರಿಗಳಿಗೆ ಆನೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಆನೆ ಸ್ಥಳಾಂತರಿಸದಿದ್ರೆ ಮುಂದಾಗೋ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ತಿಳಿಸಿದ್ದಾರೆ.

Join Whatsapp