ಚಿಕ್ಕಮಗಳೂರು: ಫ್ರೆಂಡ್ಸ್  ಆಟೋ ಚಾಲಕರ ಸಂಘದ ಅಧ್ಯಕ್ಷ ರಾಗಿ ಮಹೇಶ್ ಬಿನ್ನಡಿ ಆಯ್ಕೆ

Prasthutha|

ಕೊಟ್ಟಿಗೆಹಾರ: ಕೊಟ್ಟಿಗೆಹಾರ ಫ್ರೆಂಡ್ಸ್ ಆಟೋ ಚಾಲಕರ ಸಂಘ ಅಧ್ಯಕ್ಷರಾಗಿ ಬಿನ್ನಡಿ ಮಹೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಗೌರವ ಅಧ್ಯಕ್ಷರಾಗಿ ವೇಣುಗೋಪಾಲ್ ಪೈ , ಉಪಾಧ್ಯಕ್ಷರಾಗಿ ದೀಪಕ್, ಕಾರ್ಯದರ್ಶಿಯಾಗಿ ಪ್ರಸಾದ್  ಅವರನ್ನು ಆಯ್ಕೆ ಮಾಡಲಾಯಿತು.

- Advertisement -

ಮಾಜಿ ಆಟೋ ಸಂಘದ ಅಧ್ಯಕ್ಷರಾಗಿದ್ದ  ನಾಗೇಶ್ ಮತ್ತು ಮಾಜಿ ಕಾರ್ಯದರ್ಶಿ ರಮೇಶ್ ಅವರನ್ನು ಬಿಳ್ಕೊಡುಗೆಯೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಟೋ ಸಂಘದ ಸದಸ್ಯರಾದ ಕೌಶಿಕ್, ದೇವೇಂದ್ರ,  ವಿಜಯ್, ದಿಲೀಪ್, ಜಗದೀಶ್,ಶರಣು, ಪೂರ್ಣೇಶ್, ಮಹೇಂದ್ರ, ಪ್ರವೀಣ, ಗಣೇಶ್, ಸಚೀನ್,  ನಾಗೇಶ್, ಸುಲೆಮಾನ್, ರಮೇಶ್, ಸುಮನ್, ಶ್ರೀನಿವಾಸ್ ಗೌಡ,ಸುರೇಶ್, ದಿನೇಶ್ ಮುಂತಾದವರು ಇದ್ದರು.

Join Whatsapp