ಚಿಕ್ಕಮಗಳೂರು : ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾದ ನೂರಾರು ಎಕರೆ ಅರಣ್ಯ

Prasthutha|

ಮೂಡಿಗೆರೆ: ಕಾಡ್ಗಿಚ್ಚಿಗೆ ನೂರಾರು ಎಕರೆ ಅರಣ್ಯ ಆಹುತಿಯಾದ ಘಟನೆ ತಾಲೂಕಿನ ಚಾರ್ಮಾಡಿ ಘಾಟಿಯ ಸೋಮನಕಾಡು ಅರಣ್ಯ ಪ್ರದೇಶದಲ್ಲಿ ನಡೆದಿದೆ.

- Advertisement -

ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಬಾಳೂರು ಮೀಸಲು ಅರಣ್ಯದ ಚಾರ್ಮಾಡಿ ಘಾಟ್ ನಲ್ಲಿ ಹಬ್ಬಿದ ಬೆಂಕಿಗೆ  ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗಿದ್ದು, ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.

ಯಾರೋ ಕಿಡಿಗೇಡಿಗಳು ಬೆಂಕಿ ಹಾದ್ದಾರೆ ಎಂದು ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -