ಚಿಕ್ಕಮಗಳೂರು : ಟ್ರಾನ್ಸ್ ಫಾರ್ಮರ್ ಗೆ ಕನೆಕ್ಷನ್ ಕೊಡಲು ಲಂಚ; ಎಸಿಬಿ ರೈಡ್, ಮೆಸ್ಕಾಂ ಅಧಿಕಾರಿಗಳು ಸೆರೆ

Prasthutha|

ಚಿಕ್ಕಮಗಳೂರು: ಲಂಚ ಸ್ವೀಕರಿಸುವಾಗ ವಿದ್ಯುತ್ ಪ್ರಸರಣ ನಿಗಮದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿರುವ  ಘಟನೆ ನಗರದ ಕೆಇಬಿ ಕಚೇರಿಯಲ್ಲಿ ನಡೆದಿದೆ.

- Advertisement -

ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳನ್ನು ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಹಾಗೂ ಅಸಿಸ್ಟೆಂಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿದಾನಂದ ಎಂದು ಗುರುತಿಸಲಾಗಿದೆ.

ಟ್ರಾನ್ಸ್ ಫಾರ್ಮರ್ ಗೆ ಪವರ್ ಕನೆಕ್ಷನ್ ಕೊಡಲು ಹನ್ನೆರಡು ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು ಮೊದಲು ಐದು ಸಾವಿರ ಹಣ ಪಡೆದುಕೊಂಡು ಪುನಃ ಏಳು ಸಾವಿರ ಹಣ ಪಡೆದುಕೊಳ್ಳುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕೈಯಲ್ಲಿ ಹಣವಿರುವಾಗಲೇ ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.

- Advertisement -

ಕಾರ್ಯಾಚರಣೆಯಲ್ಲಿ ಎಸಿಬಿ ಡಿ.ವೈ.ಎಸ್ಪಿ. ಸುನಿಲ್ ಕುಮಾರ್, ಎಸಿಬಿ ಇನ್ಸ್ಪೆಿಕ್ಟರ್ ಅನಿಲ್ ರಾಥೋಡ್ ಸೇರಿದಂತೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ  ಜಮೀನಿನ ಪಕ್ಕಾಪೋಡು ಮಾಡಿಕೊಡಲು ನಾಲ್ಕು ಲಕ್ಷ ಹಣ ಕೇಳಿದ್ದ ಸರ್ವೇಯರ್ ಪ್ರಕಾಶ್ ಎಂಬವರು ತಾಲೂಕು ಆಫೀಸ್ ಆವರಣದಲ್ಲಿ ಮುಂಗಡವಾಗಿ ಒಂದು ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಅತಿಥಿಯಾಗಿದ್ದರು.

Join Whatsapp