ಚಿಕ್ಕಬಳ್ಳಾಪುರ : ಇಲ್ಲಿನ ಹಿರೇನಾಗವೇಲಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತದ ನಂತರ ತಲೆ ಮರೆಸಿಕೊಂಡಿದ್ದ ಕ್ರಷರ್ ಮಾಲೀಕ, ಬಿಜೆಪಿ ಮುಖಂಡ ನಾಗರಾಜು ರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಇನ್ನೋರ್ವ ಮಾಲೀಕ ರಾಘವೇಂದ್ರ ರೆಡ್ಡಿಯನ್ನು ಬಂಧಿಸಲಾಗಿದೆ.
ಸ್ಫೋಟದ ಬಳಿಕ ಇವರು ತಲೆ ಮರೆಸಿಕೊಂಡಿದ್ದರು. ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಘಟನೆಗೆ ಸಂಬಂಧಿಸಿ ಸ್ಫೋಟಕಗಳನ್ನು ಪೂರೈಸುತ್ತಿದ್ದ ಗಣೇಶ್ ಎಂಬಾತನನ್ನೂ ಬಂಧಿಸಲಾಗಿದೆ.
ಘಟನೆಗೆ ಪೊಲೀಸ್ ವೈಫಲ್ಯವೂ ಕಾರಣವಾದುದರಿಂದ, ಕರ್ತವ್ಯ ಲೋಪದ ಆರೋಪದಡಿ ಗುಡಿಬಂಡೆ ಇನ್ಸ್ ಪೆಕ್ಟರ್ ಮಂಜುನಾಥ್, ಎಸ್ ಐ ಗೋಪಾಲ್ ರೆಡ್ಡಿ ಅವರನ್ನು ಅಮಾನತು ಮಾಡಲಾಗಿದೆ.
ಹಿರೇನಾಗವೇಲಿ ಒಂದೇ ಗ್ರಾಮದಲ್ಲಿ 250-300 ಎಕರೆ ಜಾಗದಲ್ಲಿ ಸುಮಾರು 53 ಕ್ವಾರಿಗಳಿವೆ. ಇಲ್ಲಿನ ಬೆಟ್ಟವನ್ನೇ ಪುಡಿಪುಡಿ ಮಾಡಿ ಕ್ವಾರಿ ಮಾಡಲಾಗುತ್ತಿದೆ ಎನ್ನಲಾಗಿದೆ.