ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಿದ್ದ ವಯೋವೃದ್ಧ ಆಟೊ ಚಾಲಕನಿಗೆ ಫೇಸ್ ಬುಕ್ ಮೂಲಕ ಜನರಿಂದ 24 ಲಕ್ಷ ರೂ. ನೆರವು

Prasthutha|

ಮುಂಬೈ : ಮೊಮ್ಮಗಳ ಓದಿಗಾಗಿ ತಮ್ಮ ಮನೆ ಮಾರಿ, ರಿಕ್ಷಾವನ್ನೇ ಮನೆ ಮಾಡಿದ್ದ ಬಡ ವಯೋವೃದ್ಧನ ಬಗ್ಗೆ ಫೇಸ್ ಬುಕ್ ಪೇಜ್ ಒಂದರಲ್ಲಿ ಸುದ್ದಿಯಾದ ಬಳಿಕ, ಸಾರ್ವಜನಿಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಮಾಚಲ ಪ್ರದೇಶದ ದೇಶರಾಜ ಸಿಂಗ್ ಅವರಿಗೆ ಈಗ ಸಾರ್ವಜನಿಕರು ನೀಡಿದ ಸಹಾಯದ ಮೊತ್ತ 24 ಲಕ್ಷ ರೂ. ಆಗಿದೆ.

ದೇಶರಾಜ್ ಸಿಂಗ್ (74) ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದರು. ಈ ಬಗ್ಗೆ ಹ್ಯೂಮನ್ಸ್ ಆಫ್ ಬಾಂಬ್ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗಿತ್ತು. ಆಟೊ ಡ್ರೈವರ್ ದೇಶರಾಜ್ ಅವರ ಪ್ರೊಫೈಲ್ ಅನ್ನು ರಚಿಸಿ, ಫೇಸ್ ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು. ಆ ನಂತರ ಆಟೊ ಚಾಲಕನ ಕಥೆ ವೈರಲ್ ಆಗಿದ್ದು, ಇದನ್ನು ಗಮನಿಸಿದ ಸಾಕಷ್ಟು ಮಂದಿ ಸಹಾಯ ಹಸ್ತ ಚಾಚಿದ್ದಾರೆ.

- Advertisement -

ಹ್ಯೂಮನ್ಸ್ ಆಫ್ ಬಾಂಬೆ ಫೇಸ್ ಬುಕ್ ಪೇಜ್ ಆನ್ ಲೈನ್ ದೇಣಿಗೆ ಸಂಗ್ರಹ ಅಭಿಯಾನದ ಕ್ರೌಡ್ ಫಂಡಿಂಗ್ ಮೂಲಕ ಒಟ್ಟು 24 ಲಕ್ಷ ರೂ. ಸಂಗ್ರಹಿಸಿ, ದೇಶರಾಜ್ ಅವರಿಗೆ ಹಸ್ತಾಂತರಿಸಿದೆ. ಈ ಮೂಲಕ ವಯೋವೃದ್ಧ ಬಡ ರಿಕ್ಷಾ ಚಾಲಕನ ಕಷ್ಟಕ್ಕೆ ನೆರವಾಗಿದೆ.

- Advertisement -