ಮುಖ್ಯಮಂತ್ರಿಗಳೇ ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು, ಸಂವಿಧಾನ ವಿರೋಧಿ RSSಗೆ ಅಲ್ಲ: ಬಿ.ಕೆ. ಹರಿಪ್ರಸಾದ್

Prasthutha|

ಬೆಂಗಳೂರು: ಮುಖ್ಯಮಂತ್ರಿಗಳೇ ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು, ಸಂವಿಧಾನ ವಿರೋಧಿ RSSಗೆ ಅಲ್ಲ..! ದೇಶ ವಿರೋಧಿ ಕೃತ್ಯಗಳನ್ನು ನಡೆಸುವ ಸಂಘಟನೆಗೆ ಬೆಂಬಲಿಸುವುದು, ನಿಮ್ಮ ಸ್ಥಾನಕ್ಕೆ, ಘನತೆಗೆ ತಕ್ಕುದಲ್ಲ. ಗುಲಾಮಗಿರಿ ಮಾಡುವುದೇ ಆದರೆ ಸಿಎಂ ಕುರ್ಚಿ ಖಾಲಿ ಮಾಡಿ ಮೊದಲು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಿಎಂ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

- Advertisement -


ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಅಮೃತ ಭಾರತಿ- ಕರುನಾಡ ಜಾತ್ರೆ ಕಾರ್ಯಕ್ರಮದಲ್ಲಿ ಸಿ ಎಂ ಬೊಮ್ಮಾಯಿ ಮಾತನಾಡುವಾಗ, ನಾನು ಆರೆಸ್ಸೆಸ್ ಗೆ ತಲೆಬಾಗಿರುವೆ ಎಂದು ಹೇಳಿಕೆ ನೀಡಿದ್ದರು.
ಈ ಕುರಿತ ಪತ್ರಿಕಾ ವರದಿಯನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿರುವ ಹರಿಪ್ರಸಾದ್, ಮುಖ್ಯಮಂತ್ರಿಗಳೇ ತಲೆಬಾಗಬೇಕಿರುವುದು ಸಂವಿಧಾನಕ್ಕೆ ಹೊರತು, ಸಂವಿಧಾನ ವಿರೋಧಿ RSSಗೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.



Join Whatsapp