ಫೇಸ್ ಬಯೋಮೆಟ್ರಿಕ್ ಮೂಲಕ ಒಳಪ್ರವೇಶಿಸುವ “ಡಿಜಿಯಾತ್ರಾ” ಯೋಜನೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಜಾರಿ

Prasthutha|

ಬೆಂಗಳೂರು: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮಹತ್ವದ ಯೋಜನೆಯಾದ “ಡಿಜಿಯಾತ್ರಾ” ಆಪ್ ನ ಬೀಟಾ ಆವೃತ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಿಕೊಂಡಿದ್ದು, ಆಗಸ್ಟ್ 15ರಿಂದ ಪ್ರಾರಂಭಗೊಂಡಿದೆ.

- Advertisement -


ಡಿಜಿಯಾತ್ರಾ ಎನ್ನುವ ಆಪ್ ಅನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ದೇಶದ ಎರಡು ವಿಮಾನ ನಿಲ್ದಾಣಗಳಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ. ಡಿಜಿಯಾತ್ರಾ ಎಂದರೆ, ನಿಮ್ಮ ಫೇಸ್ ಬಯೋಮೆಟ್ರಿಕ್ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಪ್ರವೇಶಿಸುವ ಯೋಜನೆಯಾಗಿದೆ. ಬೆಂಗಳೂರು ವಿಮಾನ ನಿಲ್ದಾಣದ ಇ-ಗೇಟ್ನಲ್ಲಿ ಡಿಜಿಯಾತ್ರಾ ಬಯೋಮೆಟ್ರಿಕ್ ಬೋರ್ಡಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, ಹಂತಹಂತವಾಗಿ ಎಲ್ಲಾ ಗೇಟ್ ಗಳಲ್ಲಿ ಅಳವಡಿಸಲಾಗುವುದು. ಈ ಡಿಜಿಯಾತ್ರಾ ಬಯೋಮೆಟ್ರಿಕ್ ಸಿಸ್ಟಮ್ ನಿಮ್ಮ ಮುಖಚರ್ಯದಿಂದ ನಿಮ್ಮ ಗುರುತನ್ನು ನಿಖರವಾಗಿ ಪತ್ತೆಹಚ್ಚಲಿದ್ದು, ಈ ಮೂಲಕ ನಿಮ್ಮ ಬೋರ್ಡಿಂಗ್ ಪಾಸ್ ದೃಢೀಕರಿಸಲಿದೆ.

ಪ್ರಸ್ತುತ ಡಿಜಿಯಾತ್ರಾ ಆಪ್ ನ ಯೋಜನೆಯನ್ನು ವಿಸ್ತಾರ ಏರ್ಲೈನ್ಸ್ ಹಾಗೂ ಏರ್ ಏಷಿಯಾ ಅಳವಡಿಸಿಕೊಂಡಿದೆ. ಪ್ರಯಾಣಿಕರು ಈ ವಿಮಾನಗಳಲ್ಲಿ ಪ್ರಯಾಣಿಸಲು ಮೊದಲೇ ಡಿಜಿಯಾತ್ರಾ ಆಪ್ ಅನ್ನು ಪ್ಲೇಸ್ಟೋರ್ ಮೂಲಕ ಡೌನ್ಲೋನ್ ಮಾಡಿ, ನೋಂದಣಿ ಮಾಡಿಕೊಳ್ಳಬೇಕು. ಇನ್ನೊಂದು ತಿಂಗಳಲ್ಲಿ ಐಫೋನ್ ಮೊಬೈಲ್ ಬಳಕೆದಾರರಿಗೆ ಐಒಎಸ್ ನಲ್ಲಿ ಲಭ್ಯವಾಗಲಿದೆ.
ಈ ಕುರಿತು ಮಾತನಾಡಿದ ಬಿಐಎಎಲ್ ನ ಸಿಇಒ ಹರಿಮರಾರ್, ಪ್ರಯಾಣಿಕರ ಪ್ರಯಾಣವನ್ನು ಸರಳೀಕರಿಸುವ ಉದ್ದೇಶವನ್ನು ನಾವು ಹಿಂದಿನಿಂದಲೂ ಹೊಂದಿದ್ದೆವು. ಇದೀಗ ಡಿಜಿಯಾತ್ರಾ ಸೆಂಟ್ರಲ್ ಇಕೋಸಿಸ್ಟಮ್ ಅಳವಡಿಕೆ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಜನಸ್ನೇಹಿ ಮಾಡಲಾಗಿದೆ.

- Advertisement -


ಡಿಜಿಯಾತ್ರ ಆಪ್ ಅನ್ನು ಡಿವೈಸಿ ಇ, ವರ್ಲ್ಡ್ ವೈಡ್ ವೆಬ್ ಕನ್ಸಾರ್ಟಿಯಂ ವ್ಯಾಖ್ಯಾನಿಸಿದ ಮಾನದಂಡಗಳ ಅನ್ವಯ ನಿರ್ಮಿಸಲಾಗಿದ್ದು ಅದರಲ್ಲಿ ಪರಿಶೀಲಿಸಬಹುದಾದ ರುಜುವಾತುಗಳೊಂದಿಗೆ (ವೆರಿಫೈಯಬಲ್ ಕ್ರೆಡೆನ್ಷಿಯಲ್ಸ್-ವಿಸಿಗಳು) ಸೆಲ್ಫ್ ಸಾವರಿನ್ ಐಡೆಂಟಿಟಿ (ಎಸ್ಎಸ್ಐ), ಡಿಸೆಂಟ್ರಲೈಸ್ಡ್ ಐಡೆಂಟಿಫೈರ್ಸ್ (ಡಿಐಡಿಗಳು) ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ನ ವಿಶ್ವಾಸಾರ್ಹತೆ ಮತ್ತು ಖಾಸಗಿತನದ ವಿನ್ಯಾಸ ಹಾಗೂ ಖಾಸಗಿತನವನ್ನು ಸಹಜವಾಗಿ ಮೂಲಭೂತ ಸಿದ್ಧಾಂತಗಳಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ ಖಾಸಗಿತನದ ಸಮಸ್ಯೆಗಳ ಕಾಳಜಿ ವಹಿಸಲಾಗುತ್ತದೆ ಮತ್ತು ಪ್ರಯಾಣಿಕರು ಅವರ ದತ್ತಾಂಶ ಹಂಚಿಕೊಳ್ಳುವ ಬಗ್ಗೆ ಆತಂಕ ಪಡಬೇಕಿಲ್ಲ. ಏಕೆಂದರೆ ಅದು ಸುರಕ್ಷಿತವಾಗಿರುತ್ತದೆ ಮತ್ತು ಅವರ ಪ್ರಯಾಣದ 24 ಗಂಟೆಗಳ ನಂತರ ವಿವರನ್ನು ಅಳಿಸಲಾಗುತ್ತದೆ.


ಡಿವೈಸಿಇ ಡಿಜಿ ಯಾತ್ರಾ ಫೌಂಡೇಷನ್ (ಡಿವೈಎಫ್) ಉಪಕ್ರಮವಾಗಿದ್ದು 2019ರಲ್ಲಿ ಪ್ರಾರಂಭವಾದ ಜಂಟಿ ಸಹಯೋಗದ ಕಂಪನಿಯಾಗಿದೆ. ಬಿಐಎಎಲ್ ಅದರ ಪ್ರಮುಖ ಷೇರುದಾರರಲ್ಲಿ ಒಂದಾಗಿದೆ. ಡಿಜಿಯಾತ್ರಾ ಫೌಂಡೇಷನ್ ಅಖಿಲ ಭಾರತ ಸಂಸ್ಥೆಯಾಗಿದೆ ಮತ್ತು ಪ್ರಯಾಣಿಕರ ಗುರುತಿನ ದೃಢೀಕರಣ ಪ್ರಕ್ರಿಯೆಯ ಪಾಲಕನಾಗಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp