ಆರ್ಥಿಕ ಕರಾಳತೆ; 40 ವರ್ಷದಲ್ಲೇ 2020-21 ಕರಾಳ ಹಣಕಾಸು ವರ್ಷ : ಪಿ. ಚಿದಂಬರಂ

Prasthutha|

ನವದೆಹಲಿ : ಕಳೆದ ನಾಲ್ಕು ದಶಕಗಳಲ್ಲೇ ಭಾರತದ ಆರ್ಥಿಕತೆಯ ಪಾಲಿಗೆ 2020-21ನೇ ಹಣಕಾಸಿನ ವರ್ಷ ಕರಾಳ ವರ್ಷ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದ್ದಾರೆ. ಜಿಡಿಪಿ ಕುರಿತಂತೆ ನಡೆದ ವರ್ಚುವಲ್‌ ಸಂವಾದದಲ್ಲಿ ತಮ್ಮ ಅಭಿಪ್ರಾಯವನ್ನು ಅವರು ಮಂಡಿಸಿದ್ದಾರೆ.

- Advertisement -

2020-21ರ ಜಿಡಿಪಿ, 2018-19ರ ಜಿಡಿಪಿಗಿಂತಲೂ ಕಡಿಮೆಯಿದೆ. 2020-21ನೇ ಹಣಕಾಸು ವರ್ಷದ ನಾಲ್ಕು ತ್ರೈಮಾಸಿಕ ವರದಿಗಳೇ ಜಿಡಿಪಿ ಕರುಣಾಜನಕ ಕತೆ ಹೇಳುತ್ತದೆ. ದೇಶದ ಆರ್ಥಿಕ ಸ್ಥಿತಿ ತೀರಾ ಕೆಟ್ಟಿದೆ. ಹೀಗಾಗಿ ಸರಕಾರ ನೋಟುಗಳನ್ನು ಮುದ್ರಿಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ವರ್ಷದ ಮಧ್ಯಂತರದಲ್ಲಿ ಹಣಕಾಸು ಸಚಿವರು ಆರ್ಥಿಕತೆಯು ಪ್ರಗತಿ ಕಾಣುತ್ತಿದೆ ಎಂದಿದ್ದರು, ಇದೇನಾ ಪ್ರಗತಿ ಎಂದು ಅವರು ಪ್ರಶ್ನಿಸಿದರು.

- Advertisement -

ದೇಶದ ತಲಾ ಆದಾಯವೂ ಕೂಡ ಕಳೆದ ಒಂದು ವರ್ಷದಲ್ಲಿ ಶೇ.8.2ರಷ್ಟು ಕುಸಿದಿದೆ. ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ ಭಾರತದ ಬಡವರ ಪ್ರಮಾಣ ತೀರಾ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಅಂಕಿಸಂಖ್ಯೆಗಳ ಕಚೇರಿ ಜಿಡಿಪಿಗೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ, 2020-21ರಲ್ಲಿ ಭಾರತದ ಜಿಡಿಪಿ ಶೇ.7.3ಕ್ಕೆ ಕುಸಿತಗೊಂಡಿದೆ ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಚಿದಂಬರಂ ಈ ಹೇಳಿಕೆ ನೀದ್ದಾರೆ.

Join Whatsapp