ಚಿಕನ್ ಪ್ರಿಯರಿಗೆ ಕಹಿ ಸುದ್ದಿ: ದ.ಕ ಜಿಲ್ಲೆಯಲ್ಲಿ ಕೋಳಿ ಮಾಂಸ ದುಬಾರಿ

Prasthutha|

ಮಂಗಳೂರು: ಕೋಳಿಗಳ ಉತ್ಪಾದನೆ ಕಡಿಮೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಹಿತ ರಾಜ್ಯಾದ್ಯಂತ ಕೋಳಿ ಮಾಂಸ ದುಬಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆ ಅಂಗಡಿಗಳಲ್ಲಿ 1 ಕೆ.ಜಿ. ಬ್ರಾಯ್ಲರ್ ಕೋಳಿಯ ಬೆಲೆ 180ರಿಂದ 190 ರೂ. ಗೆ ಮಾರಾಟವಾಗುತ್ತಿದೆ.

- Advertisement -

ಟೈಸನ್ ಕೆ.ಜಿ.ಗೆ 160 ರೂ. ಇದ್ದರೆ, ಚರ್ಮ ಸಹಿತ ಕೋಳಿ ಮಾಂಸ 270 ರೂ. ಮತ್ತು ಚರ್ಮ ರಹಿತ ಕೋಳಿ ಮಾಂಸ 290 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಕೋಳಿ ಮಾಂಸದ ಖಾದ್ಯಗಳ ಬೆಲೆಯೂ ಹೆಚ್ಚಳವಾಗಿದ್ದು, ಕೋಳಿ ಮಾಂಸ ಪ್ರಿಯರ ಕಿಸೆಗೆ ಕತ್ತರಿ ಹಾಕಿದೆ.

ಕೋಳಿ ಮಾಂಸದ ಬೆಲೆ ಏರಿಕೆಯಾಗಲು ಮುಖ್ಯ ಕಾರಣ, ಸುಡು ಬಿಸಿಲು ಹಾಗೂ ನೀರಿನ ಪೂರೈಕೆ ಕಡಿಮೆಯಾಗಿದ್ದು, ಅಲ್ಲದೆ ಕೋಳಿ ಆಹಾರ ತಯಾರಿಸಲು ಬಳಕೆಯಾಗುವ ಜೋಳ ಮತ್ತು ಸೋಯಾ ಬೆಲೆ ಏರಿಕೆಯಾಗಿದೆ.

- Advertisement -

ಫಾಸ್ಟ್ ಫುಡ್ ಮಳಿಗೆಗಳಲ್ಲಿ ಕೋಳಿ ಮಾಂಸದ ಖಾದ್ಯಗಳ ಬೆಲೆ ಏರಿಕೆಯಾಗಿದೆ. ಚಿಕನ್ ಟಿಕ್ಕಾ, ಚಿಕನ್ ಚಿಲ್ಲಿ, ಚಿಕನ್ ಕಬಾಬ್ ಗಳ ಬೆಲೆಯನ್ನು ಕೂಡ ತುಸು ಏರಿಸಲಾಗಿದೆ.

ಕರಾವಳಿಯಲ್ಲಿ ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಕೆ ನಿಷೇಧವಾಗಿರುವುದರಿಂದ ಮೀನಿನ ಕಡಿಮೆ ಲಭ್ಯತೆ ಹಾಗೂ ದರ ಹೆಚ್ಚಳದ ಪರಿಣಾಮ ಕೋಳಿ ಮಾಂಸಕ್ಕೆ ಸಹಜವಾಗಿ ಬೇಡಿಕೆ ಹೆಚ್ಚುತ್ತದೆ. ಹೀಗಾಗಿ, ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ವ್ಯಾಪಾರಸ್ಥರು.

Join Whatsapp