ಛತ್ತೀಸ್’ಗಡ: ಎನ್’ಕೌಂಟರ್’ನಲ್ಲಿ 26 ನಕ್ಸಲರ ಹತ್ಯೆ

Prasthutha|

ಛತ್ತೀಸ್’ಗಡ: ಛತ್ತೀಸ್’ಗಡದ ಗಡಿ ಪ್ರದೇಶದ ಗಡ್’ಚಿರೋಲಿ ದನೋರಾ ಅರಣ್ಯ ವಲಯದಲ್ಲಿ ಸಿಪಿಐ (ಮಾವೋವಾದಿ) ಸಂಘಟನೆ ಮತ್ತು ನಕ್ಸಲ್ ನಿಗ್ರಹ ದಳದ ನಡುವೆ ಗುಂಡಿನ ಚಕಮಕಿಯಲ್ಲಿ ಕನಿಷ್ಠ 26 ನಕ್ಸಲರನ್ನು ಹತ್ಯೆ ಮಾಡಲಾಗಿದೆ.

- Advertisement -

ಅರಣ್ಯದಿಂದ 26 ನಕ್ಸಲೀಯರ ಮೃತದೇಹಗಳನ್ನು ವಶಕ್ಕೆ ಪಡೆದಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದಾರೆ. ಹೆಚ್ಚುವರಿ ಎಸ್ ಪಿ ಸೌಮ್ಯ ಮುಂಡೆ ನೇತೃತ್ವದಲ್ಲಿ ಸಿ-60 ಪೊಲೀಸ್ ಕಮಾಂಡೋ ಪಡೆ ಶೋಧ ಕಾರ್ಯ ನಡೆಸುತ್ತಿದ್ದಾಗ ಮರ್ಡಿಂಟೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಶನಿವಾರ ಬೆಳಗ್ಗೆ ಎನ್ ಕೌಂಟರ್ ನಡೆದಿರುವುದಾಗಿ ಗೋಯಲ್ ತಿಳಿಸಿದ್ದಾರೆ. ಹತ್ಯೆಗೀಡಾದ ನಕ್ಸಲೀಯರ ಪತ್ತೆ ಇನ್ನೂ ಧೃಡಪಟ್ಟಿಲ್ಲ. ಉನ್ನತ ನಕ್ಸಲ್ ಮುಖಂಡನೊಬ್ಬ ಸಾವನ್ನಪ್ಪಿರುವ ಬಗ್ಗೆ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಕಾರ್ಯಾಚರಣೆ ವೇಳೆಯಲ್ಲಿ ನಾಲ್ವರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ನಾಗಪುರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಯೊಬ್ಬರು ಹಿಂದೆ ತಿಳಿಸಿದ್ದರು. ಶುಕ್ರವಾರ ರಾತ್ರಿ ಆರಂಭವಾದ ಎನ್‌ಕೌಂಟರ್ ಈಗಲೂ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp