ಉದ್ಯೋಗಸ್ಥ ಮಹಿಳಾ ಸ್ನೇಹಿ ನಗರ – ಸಮೀಕ್ಷೆಯಲ್ಲಿ ಚೆನ್ನೈಗೆ ಅಗ್ರ ಸ್ಥಾನ

Prasthutha|

ಚನ್ನೈ: ಮಹಿಳಾ ಉದ್ಯೋಗಸ್ಥ ಸ್ನೇಹಿಯಾದ ನಗರಗಳಲ್ಲಿ ಚೆನ್ನೈ ಅಗ್ರ ಸ್ಥಾನದಲ್ಲಿದೆ. ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿವೆ ಮತ್ತು ದೇಶದ ರಾಜಧಾನಿ ದೆಹಲಿ 14ನೇ ಸ್ಥಾನದಲ್ಲಿದೆ ಎಂದು ಅವತಾರ್ ಎಂಬ ಕಂಪನಿ ನಡೆಸಿದ ಅಧ್ಯಯನವೊಂದು ತಿಳಿಸಿದೆ.

- Advertisement -

ಜೀವನದ ಸೌಕರ್ಯ, ಮಹಿಳಾ ಸುರಕ್ಷತೆ, ಮಹಿಳಾ ಪ್ರಾತಿನಿಧ್ಯ ಮತ್ತು ಮಹಿಳಾ ಸಬಲೀಕರಣ ಎಂಬ ಅಂಶಗಳನ್ನು ಆಧರಿಸಿ ಅವತಾರ್ ಎಂಬ ಕಂಪನಿ ಈ ಸಮೀಕ್ಷೆಯನ್ನು ನಡೆಸಿದೆ. ವಿವಿಧ ಸಂಸ್ಥೆಗಳು ಮತ್ತು ಮಾಲೀಕರು ಹಾಗೂ ಮುಖ್ಯಸ್ಥರು ಮಹಿಳೆಯರಿಗೆ ಎಷ್ಟರ ಮಟ್ಟಿಗೆ ಸೌಕರ್ಯಗಳನ್ನು ಒದಗಿಸುತ್ತಾರೆ ಎಂಬ ವಿಷಯದ ಕುರಿತು ಸಮೀಕ್ಷೆಯನ್ನೂ ಸಹ ನಡೆಸಲಾಯಿತು. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ನಗರಗಳಾದ ತಿರುಚಿನಾಪಳ್ಳಿ, ವೆಲ್ಲೂರು, ಈರೋಡ್, ಸೇಲಂ ಮತ್ತು ತಿರುಪ್ಪೂರ್ ಅತ್ಯುನ್ನತ ಸ್ಥಾನ ಪಡೆದಿವೆ. ಒಟ್ಟು ಉನ್ನತ 25 ರಾಜಧಾನಿಗಳಲ್ಲಿ ಕೇವಲ ಹತ್ತು ನಗರಗಳು ಮಾತ್ರ ಅನುಕೂಲಕರ ನಗರಗಳಾಗಿವೆ. ರಾಜಧಾನಿಗಳು ಮಹಿಳೆಯರು ಎದುರಿಸುತ್ತಿರುವ ಭದ್ರತೆಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಒಟ್ಟಾರೆಯಾಗಿ, ಉತ್ತರಭಾರತದ ನಗರಗಳಿಗಿಂತ ದಕ್ಷಿಣಭಾರತದ ನಗರಗಳು ಉತ್ತಮವಾಗಿವೆ ಎಂದು ಸಮೀಕ್ಷೆ ಹೇಳಿದೆ.

Join Whatsapp