ಟರ್ಕಿ ಅಧ್ಯಕ್ಷರ ಅವಮಾನಕಾರಿ ವ್ಯಂಗ್ಯ ಚಿತ್ರ ಪ್ರಕಟಿಸಿದ ಚಾರ್ಲಿ ಹೆಬ್ಡೊ

Prasthutha|

ಇಸ್ಲಾಮೋಫೋಬಿಕ್ ವ್ಯಂಗ್ಯ ಚಿತ್ರಗಳನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಇಸ್ಲಾಮ್ ವಿರೋಧಿ ನೀತಿಗಳಿಗಾಗಿ ಟರ್ಕಿ ಅಧ್ಯಕ್ಷ ರಸೆಪ್ ತಯ್ಯಿಪ್ ಉರ್ದುಗನ್ ಇತ್ತೀಚೆಗೆ  ಫ್ರೆಂಚ್ ಅಧ್ಯಕ್ಷರನ್ನು ತೀವ್ರವಾಗಿ ಟೀಕಿಸಿದ್ದರು. ಇದೀಗ ಚಾರ್ಲಿ ಹೆಬ್ಡೆ ತನ್ನ ಮುಖಪುಟದಲ್ಲಿ ಉರ್ದುಗಾನ್ ರ ಅವಹೇಳನಕಾರಿ ವ್ಯಂಗ್ಯ ಚಿತ್ರವನ್ನು ಪ್ರಕಟಿಸುವ ಮೂಲಕ ಅವರನ್ನು ಅಪಹಾಸ್ಯಮಾಡಿದೆ.

ಟರ್ಕಿ ಇದನ್ನು ಖಂಡಿಸಿದ್ದು,  “ಸಾಂಸ್ಕೃತಿಕ ಜನಾಂಗೀಯತೆ ಮತ್ತು ದ್ವೇಷವನ್ನು ಹರಡುವ ಪ್ರಕಾಶನದ ಈ ಅಸಹ್ಯಕರ ಪ್ರಯತ್ನವನ್ನು ನಾವು ಖಂಡಿಸುತ್ತೇವೆ” ಎಂದು ಉರ್ದುಗನ್ ರ ಉನ್ನತ ಮಾಧ್ಯಮ ಸಹಾಯಕ ಫಹ್ರತಿನ್ ಅಲ್ತುನ್ ಟ್ವೀಟ್ ಮಾಡಿದ್ದಾರೆ.

- Advertisement -

“ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ರ ಮುಸ್ಲಿಮ್ ವಿರೋಧಿ ಅಜೆಂಡಾ ಫಲ ನೀಡುತ್ತಿದೆ. ಚಾರ್ಲಿ ಹೆಬ್ಡೊ ನಮ್ಮ ಅಧ್ಯಕ್ಷರ ಅವಮಾನಕರ ಚಿತ್ರಗಳ ಸರಣಿಯನ್ನು
ವ್ಯಂಗ್ಯ ಚಿತ್ರವೆಂದು ಪ್ರಕಟಿಸಿದೆ” ಎಂದು ಅವರು ಬರೆದಿದ್ದಾರೆ.

- Advertisement -