ಲೇವಡಿಗೆ ಕಾರಣವಾಯಿತು ಪ್ರಧಾನಿ ಮೋದಿ ‘ಅಯೋಧ್ಯೆ ರಾಮಂದಿರ’ ಹೇಳಿಕೆ

Prasthutha|

ದರ್ಬಾಂಗ : ಬಿಹಾರ ಚುನಾವಣಾ ಭಾಷಣದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ವಿಚಾರವಾಗಿ ಮಾತನಾಡಿದ ವಿಚಾರ ಲೇವಡಿಗೆ ಕಾರಣವಾಗಿದೆ.

- Advertisement -

ಪ್ರಧಾನಿ ಮೋದಿಯವರು ಮಾತನಾಡುತ್ತಾ, ಸಿಎಂ ನಿತೀಶ್ ಕುಮಾರ್ ಆಡಳಿತವನ್ನು ಹೊಗಳುತ್ತಲೇ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತಂತೆ ಮಾತನಾಡಿದರು. ವೇದಿಕೆಯಲ್ಲಿದ್ದ ನಿತೀಶ್ ಕುಮಾರ್ ಇಂದು ಮೋದಿ ಮಾತನಾಡಿದ್ದುದಕ್ಕೆ ತದ್ವಿರುದ್ಧವಾಗಿ 2015ರಲ್ಲಿ ಮಾತನಾಡಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಿಹಾರಿಗರು ನೆನಪಿಸಿಕೊಂಡಿದ್ದಾರೆ.   

“ಶತಮಾನಗಳ ತಪಸ್ಸಿನ ಬಳಿಕ, ಅಯೋಧ್ಯೆಯಲ್ಲಿ ಅಂತಿಮವಾಗಿ ಅದ್ದೂರಿ ರಾಮ ಮಂದಿರ ನಿರ್ಮಾಣವಾಗುತ್ತಿದೆ, ರಾಜಕೀಯದಲ್ಲಿರುವ ಕೆಲವರು ನಮಗೆ ದಿನಾಂಕ ಕೇಳುತ್ತಿದ್ದರು, ಈಗ ಅವರೂ ನಮಗೆ ಮೆಚ್ಚುಗೆ ವ್ಯಕ್ತಪಡಿಸುವಂತಾಗಿದೆ. ಇದು ಬಿಜೆಪಿಯ ಅಸ್ಮಿತೆ, ಎನ್ ಡಿಎ ಏನು ಹೇಳುತ್ತದೋ, ಅದನ್ನು ಮಾಡುತ್ತದೆ’’ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.

- Advertisement -

ಪ್ರಧಾನಿ ಮೋದಿಯವರ ಈ ಮಾತುಗಳು 2015ರಲ್ಲಿ ಸಿಎಂ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ನಡೆಸಿದ್ದ ವಾಗ್ದಾಳಿಯನ್ನು ನೆನಪಿಸಿದೆ ಎಂದು ಹಲವರು ಹೇಳಿದ್ದಾರೆ.

“ರಾಮ್ ಲಲ್ಲಾ ನಾವು ಬರುತ್ತೇವೆ, ರಾಮ ಮಂದಿರ ಅಲ್ಲೇ ಕಟ್ಟುತ್ತೇವೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಹೇಳುತ್ತಾರೆ, ಆದರೆ ದಿನಾಂಕ ಯಾವುದು ಎನ್ನುವುದನ್ನು ಹೇಳುವುದಿಲ್ಲ’’ ಎಂದು ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದರು. ನಿತೀಶ್ ಆಗ ಲಾಲು ಪ್ರಸಾದ್ ನೇತೃತ್ವದ ಆರ್ ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿದ್ದರು.   

Join Whatsapp