ಚೈತ್ರಾ ಕುಂದಾಪುರಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಡಿಸ್ಚಾರ್ಜ್ ಇಲ್ಲ: ಬಾಲಾಜಿ ಪೈ

Prasthutha|

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದರು. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಡಿಸ್ಚಾರ್ಜ್ ಇಲ್ಲ ಎಂದು ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್ ನಾ ಸ್ಪೆಷಲ್ ಆಫೀಸರ್ ಬಾಲಾಜಿ ಪೈ ಹೇಳಿದ್ದಾರೆ.

- Advertisement -


ಚೈತ್ರಾ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿ, ಚೈತ್ರಾ ಅವರು ಬರುವಾಗ ಪ್ರಜ್ಞಾಹೀನರಾಗಿ ಇದ್ರು. ಚಿಕಿತ್ಸೆ ಕೊಟ್ಟಿದ್ದೀವಿ, ಸಿಟಿ ಸ್ಕ್ಯಾನ್ ಮಾಡಿದ್ದೀವಿ. ಕಾನ್ಸಿಯಸ್ ಸ್ವಲ್ಪ ಬರ್ತಿದೆ ಈಗ ಪಿಟ್ಸ್ ಬಂದಿದ್ದೀಯಾ ಇಲ್ವಾ ಗೊತ್ತಿಲ್ಲ. ಮುಂಚೆ ಇದು ಇತ್ತು ಅಂತ ಅವರ ಸ್ನೇಹಿತರು ಹೇಳ್ತಿದ್ದಾರೆ ಎಂದರು.


ವಾಮಿಟ್ ಕಂಟೆಂಟ್, ಬ್ಲಡ್ ರಿಪೋರ್ಟ್ ಬಂದಿಲ್ಲ. ನಾಳೆ ಒಳಗಡೆ ಬರಬಹುದು. ಡಿಸ್ಚಾರ್ಜ್ ಇನ್ನೂ ಸದ್ಯಕ್ಕೆ ಇಲ್ಲ ಎಂದರು.