ಚೈತ್ರಾ ಕುಂದಾಪುರ ಉದ್ಯಮಿಗೆ ವಂಚನೆ ಮಾಡಿದ್ದು 5 ಅಲ್ಲ 10 ಕೋಟಿ…!

Prasthutha|

ಬೆಂಗಳೂರು: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 5 ಕೋಟಿ ರೂ. ವಂಚಿಸಿರುವ ಆರೋಪದ ಮೇರೆಗೆ ಪ್ರಚೋದನಾಕಾರಿ ಭಾಷಣಕಾರ್ತಿ ಚೈತ್ರಾಳನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

- Advertisement -

ಉದ್ಯಮಿ ಗೋವಿಂದ ಬಾಬು ಪೂಜಾರಿ ನೀಡಿದ ದೂರಿನ ಅನ್ವಯ ದಾಖಲಾದ ಎಫ್ಐಆರ್ ನಲ್ಲಿ ಐದು ಕೋಟಿ ರೂಪಾಯಿ ವಂಚನೆ ಆಗಿದೆ ಎಂದು ದಾಖಲಾಗಿದೆ. ಆದರೆ ಈಗ 10 ಕೋಟಿ ವಂಚನೆಯಾಗಿದೆ ಎಂದು ದೂರುದಾರ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ತಿ ಮೇಲೆ 10 ಕೋಟಿ ಸಾಲ ಪಡೆದು ಅವರಿಗೆ ಕೊಟ್ಟಿದ್ದೇನೆ. ಹಂತಹಂತವಾಗಿ ಅವರಿಗೆ ಕ್ಯಾಷ್ & ಡಿಡಿ ಮೂಲಕ ಚೈತ್ರಾ & ಗ್ಯಾಂಗ್ಗೆ ಹಣ ನೀಡಿರೋದಾಗಿ ಹೇಳುತ್ತಿದ್ದಾರೆ.
ಆಸ್ತಿ ಮೇಲೆ ಲೋನ್ ಪಡೆದದ್ದು ಹಾಗೂ ಚೈತ್ರಾ & ಗ್ಯಾಂಗ್ ಗೆ ಹಣ ಕೊಟ್ಟಿರುವ ಕುರಿತ ಎಲ್ಲಾ ದಾಖಲೆ ಸಿಸಿಬಿಗೆ ಕೊಟ್ಟಿರೋದಾಗಿ ದೂರುದಾರ ಉದ್ಯಮಿ ಗೋವಿಂದ ಬಾಬು ಪೂಜಾರಿ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp