ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳ ಬಳಕೆಯಿಂದ ಗರ್ಭಾಶಯದ ಕ್ಯಾನ್ಸರ್; ಕಂಪನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ

Prasthutha|

ವಾಷಿಂಗ್ಟನ್: ಖಾಸಗಿ ಕಂಪನಿ ಮಾರಾಟ ಮಾಡಿದ ಕೆಮಿಕಲ್ ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳನ್ನು ಬಳಸಿ ಗರ್ಭಾಶಯದ ಕ್ಯಾನ್ಸರ್ ಗೆ ತುತ್ತಾದ ಅಮೆರಿಕದ ಮಹಿಳೆಯೊಬ್ಬರು ಕಂಪನಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಪ್ರಕರಣ ವರದಿಯಾಗಿದೆ.

- Advertisement -

ಶುಕ್ರವಾರ ಲೋರಿಯಲ್ ಯುಎಸ್ ಎ ಕಂಪನಿಯ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ಆದರೆ ದಾವೆಗೆ ಸಂಬಂಧಿಸಿದಂತೆ ಲೋರಿಯಲ್ ಕಂಪನಿ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದು ಸಂತ್ರಸ್ತೆಯ ಪರ ವಕೀಲರು ಹೇಳಿದ್ದಾರೆ.

ಜೆನ್ನಿ ಮಿಶೆಲ್ ಎಂಬ ಮಹಿಳೆ ತಾನು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಉತ್ಪನ್ನಗಳನ್ನು ಬಳಸುತ್ತಿದ್ದು, ಇದರಿಂದ ಕಾಣಿಸಿಕೊಂಡ ಗರ್ಭಾಶಯದ ಕ್ಯಾನ್ಸರ್  ಕಾರಣದಿಂದ  ಅನಿವಾರ್ಯವಾಗಿ ಗರ್ಭಕೋಶವನ್ನು ತೆಗೆಸಬೇಕಾಯಿತು ಎಂದು ಸಿವಿಲ್ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

- Advertisement -

ಜರ್ನಲ್ ಆಫ್ ದಿ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಕೆಮಿಕಲ್ ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳ ಬಳಕೆ ಮತ್ತು ಗರ್ಭಾಶಯದ ಕ್ಯಾನ್ಸರ್ ನಡುವಿನ ಸಂಬಂಧದ ಕುರಿತ ಅಧ್ಯಯನವೊಂದನ್ನು  ಪ್ರಕಟಿಸಿದ ಕೆಲವೇ ದಿನಗಳ ನಂತರ ಈ ದಾವೆ ಬಂದಿದೆ ಎನ್ನಲಾಗಿದೆ.

ವರ್ಷಕ್ಕೆ ನಾಲ್ಕು ಬಾರಿಗಿಂತ ಹೆಚ್ಚು ಉತ್ಪನ್ನಗಳನ್ನು ಬಳಸುವ ಮಹಿಳೆಯರು ಉತ್ಪನ್ನಗಳನ್ನು ಬಳಸದ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಗರ್ಭಾಶಯದ ಕ್ಯಾನ್ಸರ್ ಗೆ  ಒಳಗಾಗುತ್ತಾರೆ ಎಂದು ಅಧ್ಯಯನವು ಕಂಡುಕೊಂಡಿದೆ.

ವರ್ಷಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಹೇರ್ ಪ್ರಾಡಕ್ಟ್ ಬಳಸುವ ಮಹಿಳೆಯರು, ಪ್ರಾಡಕ್ಟ್ ಬಳಸದವರಿಗಿಂತ ಗರ್ಭಾಶಯದ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆ ಎರಡು ಪಟ್ಟು ಹೆಚ್ಚಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.



Join Whatsapp