ರಾಜ್ಯಕ್ಕೆ ಕೇಂದ್ರದ ಕೊಡುಗೆ ಶೂನ್ಯ: ಶಾಸಕ ಯತೀಂದ್ರ ಸಿದ್ದರಾಮಯ್ಯ

Prasthutha|

ಬೆಂಗಳೂರು: ಮೋದಿಯವರು ಇಂದು ಬೆಂಗಳೂರು ಹಾಗು ಮೈಸೂರಿಗೆ ಆಗಮಿಸುತ್ತಿದ್ದಾರೆ, ರಾಜ್ಯಕ್ಕೆ ಕೇಂದ್ರದ ಕೊಡುಗೆ ಶೂನ್ಯ, ಬದಲಾಗಿ ನಮಗೆ ಮೋದಿ ಸರ್ಕಾರದಿಂದ ಅನ್ಯಾಯವೇ ಹೆಚ್ಚಾಗಿದೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿದ ಅವರು, ಮೋದಿ ಅವರು ಕರ್ನಾಟಕ್ಕೆ ಶೂನ್ಯ ಕೊಡುಗೆ ನೀಡಿದ್ದಾರೆ. – ಜಿಎಸ್ಟಿ ಪರಿಹಾರ ನೀಡುವಲ್ಲಿ ವಿಳಂಬ – ಜಿಎಸ್ಟಿ ಪರಿಹಾರ ಮುಂದುವರೆಸುವ ರಾಜ್ಯದ ಬೇಡಿಕೆಯ ಬಗ್ಗೆ ಮೌನ- 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಬರುವ ತೆರಿಗೆ ಪಾಲು ಗಣನೀಯವಾಗಿ ಕಡಿಮೆಯಾಗಿದೆ – 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸ್ಸು ಮಾಡಿದ್ದ 5495 ಕೋಟಿ ರೂ. ವಿಶೇಷ ಅನುದಾನದ ನಿರಾಕರಣೆ – ಅತಿವೃಷ್ಟಿ ಹಾಗು ಪ್ರವಾಹದ ನಷ್ಟ ಪರಿಹಾರ ರಾಜ್ಯವಿಟ್ಟ ಬೇಡಿಕೆಗಿಂತ ಕಡಿಮೆ ಕೊಟ್ಟಿದ್ದು – ಬೆಂಗಳೂರು ಉಪನಗರ ರೈಲು ಯೋಜನೆಗೆ ಇನ್ನೂ ಕೇಂದ್ರದ ಪಾಲು ಕೊಟ್ಟಿಲ್ಲ ಎಂದು ಅವರು ಕೇಂದ್ರದ ವೈಫಲ್ಯಗಳನ್ನು ಪಟ್ಟಿ ಮಾಡಿದ್ದಾರೆ.

 ಕೃಷಿ ಕಾಯ್ದೆಗಳನ್ನು ಇನ್ನೂ ರಾಜ್ಯ ಬಿಜೆಪಿ ಸರ್ಕಾರ ಹಿಂಪಡೆದಿಲ್ಲ – ನಿಮ್ಮದೇ ರಾಜ್ಯ ಸರ್ಕಾರ 40% ಕಮಿಷನ್ ಪಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಿಮಗೆ ಪತ್ರ ಬರೆದರೂ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. – ಮೈಸೂರನ್ನು ಪ್ಯಾರಿಸ್ ಮಾಡುವೆ ಎಂದು ಕೊಚ್ಚಿಕೊಂಡ ನೀವು ಮೈಸೂರಿಗೆ ನಯಾ ಪೈಸೆ ಹೆಚ್ಚಿನ ಹಣ ಕೊಟ್ಟಿಲ್ಲ – ಒಬ್ಬನೇ ಬಿಜೆಪಿ ಸಂಸದರೂ ಇಲ್ಲದ ತಮಿಳುನಾಡಿಗೆ 14 ವೈದ್ಯಕೀಯ ಕಾಲೇಜುಗಳು, ಆದರೆ 25 ಬಿಜೆಪಿ ಸಂಸದರನ್ನು ಕೊಟ್ಟ ನಮ್ಮ ರಾಜ್ಯಕ್ಕೆ ಅನ್ಯಾಯ – ಅಡಿಗಡಿಗೂ ಕೇಂದ್ರದಿಂದ ಅನಗತ್ಯ ಹಿಂದಿ ಹೇರಿಕೆ – ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ನಿಮ್ಮ ಸರ್ಕಾರ ವಿಫಲವಾಗಿದೆ – ಕೋವಿಡ್ ಅಲೆಯಲ್ಲಿ ಆಮ್ಲಜನಕದ ಕೊರತೆಯಿಂದ 24ಕ್ಕೂ ಹೆಚ್ಚಿನ ಜನರು ರಾಜ್ಯದಲ್ಲಿ ಸತ್ತರೂ, ಸಂಸತ್ತಿನಲ್ಲಿ O2 ಅಭಾವದಿಂದ ಯಾರು ಸತ್ತಿಲ್ಲ ಎಂದು ಹಸಿ ಸುಳ್ಳು ಹೇಳಿ ಮೃತರ ಕುಟುಂಬದವರಿಗೆ ಅವಮಾನ ಮಾಡಿದಿರಿ ಎಂದು ಬರೆದುಕೊಂಡಿದ್ದಾರೆ.

Join Whatsapp