ಕೋವಿಡ್ ಸೋಂಕು ಇನ್ನೂ ಅಂತ್ಯಗೊಂಡಿಲ್ಲ: ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ !

Prasthutha|

ನವದೆಹಲಿ: ಕೋವಿಡ್ ಸೋಂಕನ್ನು ನಿಯಂತ್ರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

- Advertisement -


ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜತೆ ಕೋವಿಡ್ ಲಸಿಕೆ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಯಾವುದೇ ಕಾರಣಕ್ಕೂ ಕೋವಿಡ್ ಸೋಂಕು ಅಂತ್ಯಗೊಂಡಿದೆ ಎಂದು ಭಾವಿಸಬೇಡಿ, ಎಚ್ಚರಿಕೆ ಅಗತ್ಯ ಎಂಬುದಾಗಿ ತಿಳಿಸಿದ್ದಾರೆ.


ಕೋವಿಡ್ ಸೋಂಕು ಮತ್ತೆ ಬರುವುದಿಲ್ಲ ಎಂದು ಭಾವಿಸಬಾರದು. ಜಿಲ್ಲೆಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲು ಕೋವಿನ್ ಅನ್ನು ಬಳಕೆ ಮಾಡಬಹುದು ಎಂದು ಸಚಿವ ಮನ್ಸುಖ್ ಸಭೆಯಲ್ಲಿ ತಿಳಿಸಿದ್ದಾರೆ.

Join Whatsapp