ಭಟ್ಕಳ : ಜಾಮಿಯಾಬಾದ್ ರಸ್ತೆಯ ತ್ಯಾಜ್ಯ ತೆರವಿಗೆ ವೆಲ್ಫೇರ್ ಪಾರ್ಟಿಯಿಂದ ಮನವಿ

Prasthutha|

ಕಾರವಾರ: ಭಟ್ಕಳದ ರಹಮತಾಬಾದ್ ಏರಿಯಾದಲ್ಲಿ ರಸ್ತೆ ಬದಿಯಲ್ಲಿ ಕಸ ರಾಶಿ ಬಿದ್ದು, ಕೊಳೆತು ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು, ಬ್ಲಾಕ್ ಅಭಿವೃದ್ಧಿ ಅಧಿಕಾರಿಯನ್ನು ಭೇಟಿಯಾಗಿ ತಕ್ಷಣ ಕಸವನ್ನು ತೆರವುಗೊಳಿಸುವಂತೆ ಮನವಿ ಮಾಡಿದರು.

- Advertisement -

ಸದ್ಯ ಇಲ್ಲಿ ಕಸದ ಬಿದ್ದಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾಗುತ್ತಿದೆ. ಮಾತ್ರವಲ್ಲ ಈ ಪರಿಸರದಲ್ಲಿ ಸೊಳ್ಳೆಗಳು ಹೆಚ್ಚಾಗಿರುವುದರಿಂದ ಪುಟಾಣಿ ಮಕ್ಕಳು ಡೆಂಗಿ ಜ್ವರಕ್ಕೆ ತುತ್ತಾಗುವ ಸಾಧ್ಯತೆಯಿದೆ.

ಈ ನಿಟ್ಟಿನಲ್ಲಿ ಇಲ್ಲಿನ ಕಸದ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ನೆರವಾಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತನ್ನ ಮನವಿಯಲ್ಲಿ ಉಲ್ಲೇಖಿಸಿದೆ.

Join Whatsapp