ಇತಿಹಾಸ ಪುನರ್ ರಚನೆಗೆ ಕೇಂದ್ರ ಸರ್ಕಾರದಿಂದ ಬೆಂಬಲ: ಅಮಿತ್ ಶಾ

Prasthutha|

ಹೊಸದಿಲ್ಲಿ: ಭಾರತದ ಈಗಿರುವ ಇತಿಹಾಸದ ವಿವರಣೆ ಸರಿಯಾಗಿಲ್ಲ. ಆದ್ದರಿಂದ ಇತಿಹಾಸವನ್ನು ಮರು ರಚನೆ ಮಾಡುವ ಇತಿಹಾಸಕಾರರ ಪ್ರಯತ್ನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಳಿದ್ದಾರೆ.

- Advertisement -

ದಿಲ್ಲಿಯಲ್ಲಿ ಅಸ್ಸಾಂ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ಭಾಗದಲ್ಲಿ 150 ವರ್ಷಕ್ಕೂ ಹೆಚ್ಚು ಆಡಳಿತ ನಡೆಸಿದ 30 ಸಾಮ್ರಾಜ್ಯಗಳ ಬಗ್ಗೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ 300 ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಸಂಶೋಧನೆ ನಡೆಸಲು ಪ್ರಯತ್ನಿಸಿ ಎಂದು ಇಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಪ್ರೊಫೆಸರ್‌ಗಳಲ್ಲಿ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ನಾನೊಬ್ಬ ಇತಿಹಾಸದ ವಿದ್ಯಾರ್ಥಿಯಾಗಿದ್ದೇನೆ. ನಮ್ಮ ಚರಿತ್ರೆಯನ್ನು ಸಮರ್ಪಕವಾಗಿ ಪ್ರಸ್ತುತಪಡಿಸಲಾಗಿಲ್ಲ. ಮಾತ್ರವಲ್ಲ, ಅದನ್ನು ವಿಕೃತಗೊಳಿಸಲಾಗಿದೆ ಎಂಬುವುದನ್ನು ನಾನು ಸಾಕಷ್ಟು ಬಾರಿ ಕೇಳಿದ್ದೇನೆ. ಬಹುಶಃ ಇದು ಸತ್ಯವಾಗಿರಬಹುದು. ಆದ್ದರಿಂದ ನಾವು ಇದನ್ನು ಸರಿಪಡಿಸಬೇಕು. ಒಮ್ಮೆ ಚರಿತ್ರೆ ಸಂಪೂರ್ಣ ಬರೆದಾಗ ಈಗ ಪ್ರಸಾರ ಮಾಡುತ್ತಿರುವ ಸುಳ್ಳು ವ್ಯಾಖ್ಯಾನದ ಗೊಂದಲಗಳು ನಿವಾರಣೆಯಾಗಲಿದೆ ಎಂದು ಹೇಳಿದರು.

Join Whatsapp