5 ವರ್ಷಗಳಲ್ಲಿ ಪ್ರಧಾನಿ ಮೋದಿ ಮಾಡಿದ ವಿದೇಶ ಪ್ರವಾಸದ ವೆಚ್ಚ ಬಹಿರಂಗಪಡಿಸಿದ ಕೇಂದ್ರ

Prasthutha|

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ವಿದೇಶ ಪ್ರವಾಸಕ್ಕಾಗಿ 239 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ ಗೆ ತಿಳಿಸಿದೆ.

- Advertisement -

ಕೇರಳದ ಸಿಪಿಐ(ಎಂ) ಸದಸ್ಯ ಎಳಮರಂ ಕರೀಂ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ, ವಿದೇಶಾಂಗ ವ್ಯವಹಾರ ಇಲಾಖೆಯ ರಾಜ್ಯ ಸಚಿವ ವಿ. ಮುರಳೀಧರನ್ ಅವರು ಉತ್ತರಿಸಿದರು.

ಇತ್ತೀಚಿಗೆ ಇಂಡೋನೇಷ್ಯಾದಲ್ಲಿ ನಡೆದ ಜಿ–20 ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದರು. ಆ ಪ್ರವಾಸಕ್ಕೆ ₹ 32,09,760 ವೆಚ್ಚವಾಗಿದೆ. ಸೆಪ್ಟೆಂಬರ್ 26–28ರ ಜಪಾನ್ ಪ್ರವಾಸಕ್ಕೆ ₹ 23,86,536 ವೆಚ್ಚವಾಗಿದೆ.

- Advertisement -

ಇದೇ ವರ್ಷದಲ್ಲಿ ಪ್ರಧಾನಿಯವರ ಯೂರೋಪ್ ಪ್ರವಾಸಕ್ಕೆ ₹ 2,15,61,304 ಖರ್ಚಾದರೇ, 2019 ಸೆಪ್ಟೆಂಬರ್ 21–28 ನಡುವಿನ ಅಮೆರಿಕ ಪ್ರವಾಸಕ್ಕೆ ₹ 2,15,61,304  ಖರ್ಚಾಗಿದೆ ಎಂದು ಮುರಳೀಧರನ್ ಮಾಹಿತಿ ನೀಡಿದ್ದಾರೆ.

ಒಟ್ಟು 36 ಪ್ರವಾಸಗಳಲ್ಲಿ , 31 ಭೇಟಿಗಳಿಗೆ ವೆಚ್ಚವನ್ನು ಒದಗಿಸಲಾಗಿದೆ. ಬಾಂಗ್ಲಾದೇಶ (ಮಾರ್ಚ್ 26-27, 2021), ಯುಎಸ್ (ಸೆಪ್ಟೆಂಬರ್ 22-26, 2021), ಇಟಲಿ ಮತ್ತು ಯುಕೆ (ಅಕ್ಟೋಬರ್ 29 ರಿಂದ ನವೆಂಬರ್ 2, 2021) ಭೇಟಿಗಳ ವೆಚ್ಚವನ್ನು ಗೃಹ ವ್ಯವಹಾರಗಳ ಸಚಿವಾಲಯದ ಬಜೆಟ್ ಮುಖ್ಯಸ್ಥರಿಂದ ಭರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ವಿದೇಶ ಭೇಟಿಗಳು ಪಾಲುದಾರ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸಲು, ಭಾರತದ ದೃಷ್ಟಿಕೋನವನ್ನು ಮುಂದಿಡಲು ಮತ್ತು ಜಾಗತಿಕ ವಿಷಯಗಳ ಬಗ್ಗೆ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಭಾರತಕ್ಕೆ ಅನುವು ಮಾಡಿಕೊಟ್ಟಿದೆ  ಎಂದು ಅವರು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

Join Whatsapp