ವಿಟ್ಲ| ಖಾಸಗಿ ಬಸ್‌ ಡ್ರೈವರ್‌ಗಳ ಮಧ್ಯೆ ಹೊಡೆದಾಟ; ಇಬ್ಬರು ಪೊಲೀಸ್ ವಶ

Prasthutha|

ವಿಟ್ಲ:  ನಗರದ ಬಸ್‌ನಿಲ್ದಾಣದಲ್ಲಿ ಖಾಸಗಿ ಬಸ್‌ ಡ್ರೈವರ್‌ಗಳ ಮಧ್ಯೆ ಹೊಡೆದಾಟ ನಡೆದಿದ್ದು, ಇಬ್ಬರು ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ವಿಟ್ಲ ಬಸ್‌ ಸ್ಟ್ಯಾಂಡ್‌ನಲ್ಲಿ ಟೈಮಿಂಗ್ಸ್‌ ವಿಚಾರದಲ್ಲಿ ಮಣಿಕಂಠ ಬಸ್‌ ಮತ್ತು ಮಹೇಶ್‌ ಬಸ್‌ ಡ್ರೈವರ್‌ ಗಳು ಪ್ರಯಾಣಿಕರು ಬಸ್‌ನಲ್ಲಿ ಇರುವಾಗಲೇ ಸಾರ್ವಜನಿಕರ ಎದುರಲ್ಲೇ ಹೊಡೆದಾಡಿಕೊಂಡಿದ್ದು, ಮಾಹಿತಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ದಿನೇ ದಿನೇ ಖಾಸಗಿ ಬಸ್‌ಗಳ ಚಾಲಕರ ಜಗಳ, ಹೊಡೆದಾಟ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ವಾರಕ್ಕೊಮ್ಮೆ ವಿಟ್ಲಕ್ಕೆ ಬರುವ RTO ಅಧಿಕಾರಿಗಳು ಜೇಬು ತುಂಬಿಸಿಕೊಂಡು ಹೋಗುತ್ತಾರೆ ವಿನಃ ಇಂತಹ ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ  ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp