ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ
Prasthutha: December 9, 2021

ನವದೆಹಲಿ: ಭಾರತ ನಿಗದಿತ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮೇಲಿನ ನಿಷೇಧವನ್ನು ಮುಂದಿನ ವರ್ಷದ ಜನವರಿ 31 ರವರೆಗೆ ಮುಂದುವರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಗುರುವಾರ ತಿಳಿಸಿದೆ.
ಕೊರೋನ ವೈರಸ್ ಮತ್ತು ರೂಪಂತರಿ ಓಮಿಕ್ರಾನ್ ಬಗ್ಗೆ ಹೆಚ್ಚುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಡಿಸೆಂಬರ್ 1 ರಂದು ನಿಗದಿತ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಡಿಸೆಂಬರ್ 15 ರಿಂದ ಪುನರಾರಂಭಿಸಲು ನಿರ್ಧರಿಸಿತ್ತು. ಸೇವೆಗಳನ್ನು ಮರು ಪ್ರಾರಂಭಿಸುವುದಾಗಿ ಘೋಷಿಸಿದ ಒಂದು ವಾರದ ನಂತರ ಈಗ ಮತ್ತೆ 2022 ಜನವರಿ 31 ರವರೆಗೆ ನಿಷೇಧವನ್ನು ಮುಂದುವರಿಸುವುದಾಗಿ ಘೋಷಿಸಿದೆ.
“ ಸಕ್ಷಮ ಪ್ರಾಧಿಕಾರ ನಿಗದಿಯ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ಸೇವೆಗಳನ್ನು 2022 ರ ಜನವರಿ 31 ರವರೆಗೆ ನಿಷೇಧವನ್ನು ಮುಂದುವರಿಸುವುದಾಗಿ DGCA ಗುರುವಾರ ಹೊರಡಿಸಿದ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
