ಉತ್ತರ ಪ್ರದೇಶದ ಮತ್ತೆರಡು ಪ್ರದೇಶಗಳನ್ನು ಮರುನಾಮಕರಣ ಮಾಡಲು ಕೇಂದ್ರ ಅನುಮತಿ

Prasthutha|

ನವದೆಹಲಿ: ರಾಜ್ಯ ಸರ್ಕಾರದ ಶಿಫಾರಸುಗಳನ್ನು ಅನುಸರಿಸಿ ಉತ್ತರ ಪ್ರದೇಶದ ಎರಡು ಸ್ಥಳಗಳ ಹೆಸರುಗಳನ್ನು ಬದಲಾಯಿಸಲು ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದ್ದು, ಎರಡು ಸ್ಥಳಗಳನ್ನು ಮರುನಾಮಕರಣ ಮಾಡಲು ರಾಜ್ಯ ಸ್ರಕಾರ ಸಿದ್ದವಾಗಿದೆ.

- Advertisement -

ಗೋರಖ್ ಪುರ ಜಿಲ್ಲೆಯ ಮುನ್ಸಿಪಲ್ ಕೌನ್ಸಿಲ್ ‘ಮುಂಡೇರಾ ಬಾಜಾರ್’ ಹೆಸರನ್ನು ‘ಚೌರಿ-ಚೌರಾ’ ಎಂದು ಮತ್ತು ಡಿಯೋರಿಯಾ ಜಿಲ್ಲೆಯ ‘ತೆಲಿಯಾ ಅಫ್ಘಾನ್’ ಗ್ರಾಮದ ಹೆಸರನ್ನು ‘ತೆಲಿಯಾ ಶುಕ್ಲಾ’ ಎಂದು ಬದಲಾಯಿಸಲು ಸಚಿವಾಲಯವು ‘ನಿರಾಕ್ಷೇಪಣಾ’ ಪ್ರಮಾಣಪತ್ರಗಳನ್ನು ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲ್ವೇ ಸಚಿವಾಲಯ, ಅಂಚೆ ಇಲಾಖೆ ಮತ್ತು ಸರ್ವೇ ಆಫ್ ಇಂಡಿಯಾದಿಂದ ಒಪ್ಪಿಗೆ ಪಡೆದ ನಂತರ ಕೇಂದ್ರವು ಯಾವುದೇ ಸ್ಥಳದ ಹೆಸರನ್ನು ಬದಲಾಯಿಸಲು ನಿರಾಕ್ಷೇಪಣೆ ಪ್ರಮಾಣಪತ್ರವನ್ನು ನೀಡುತ್ತದೆ. ಇದಲ್ಲದೆ, ಹಳ್ಳಿ, ಪಟ್ಟಣ ಅಥವಾ ನಗರದ ಹೆಸರನ್ನು ಬದಲಾಯಿಸಲು, ಕಾರ್ಯನಿರ್ವಾಹಕ ಆದೇಶದ ಅಗತ್ಯವಿರುತ್ತದೆ. ಆದರೆ ಇದ್ಯಾವುದನ್ನೂ ಅನುಸರಿಸದೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿದೆ ಎನ್ನಲಾಗಿದೆ.

- Advertisement -

ಈ ಹಿಂದೆಯೂ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ತನ್ನ ಮೊದಲ ಅಧಿಕಾರಾವಧಿಯಲ್ಲೇ ಫೈಝಾಬಾದ್ ಅನ್ನು ಅಯೋಧ್ಯೆ  ಹಾಗೂ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿತ್ತು. ಅಲ್ಲದೆ, ಮೊಘಲ್ಸ್ ರಾಯ್ ಜಂಕ್ಷನ್ ಅನ್ನು ದೀನದಯಾಳ್ ಉಪಾಧ್ಯ ಎಂದು ಮರುನಾಮಕರಣ ಮಾಡಲಾಗಿತ್ತು.



Join Whatsapp